ಕರ್ನಾಟಕ

karnataka

ETV Bharat / state

ಮಂಜುನಾಥನ ಕೃಪೆಯಿಂದ ಅನರ್ಹ ಶಾಸಕರು ಗೆಲ್ಲುತ್ತಾರೆ: ಸಚಿವ ಹೆಚ್.ನಾಗೇಶ್ - ಧರ್ಮಸ್ಥಳ ಜನಜಾಗೃತಿ ವೇದಿಕೆ

ಆ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಅನರ್ಹ ಶಾಸಕರು ಮರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಅವರು ಯಾವುದೇ ಒತ್ತಡದಿಂದ ರಾಜೀನಾಮೆ ಕೊಟ್ಟಿರಲಿಲ್ಲ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ.

ಅಬಕಾರಿ ಸಚಿವ ಹೆಚ್ ನಾಗೇಶ್

By

Published : Oct 2, 2019, 4:19 AM IST

ಮಂಗಳೂರು:ಮಂಜುನಾಥ ಸ್ವಾಮಿ ಆಶೀರ್ವಾದದಿಂದ ಅನರ್ಹ ಶಾಸಕರು ಮರು ಚುನಾವಣೆಯಲ್ಲಿ ಗೆದ್ದು ಬಂದು ಮತ್ತೆ ತಮ್ಮ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಲಿದ್ದಾರೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದಲ್ಲಿ ಸಚಿವ ಹೆಚ್​ ನಾಗೇಶ್​

ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು. ನಂತರ ಮಾತನಾಡಿದ ಅವರು ಅನರ್ಹ ಶಾಸಕರು ಯಾವುದೇ ಒತ್ತಡದಿಂದ ರಾಜೀನಾಮೆ ನೀಡಿರಲಿಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಇಲಾಖೆಯಿಂದ ಬರುವ ಆದಾಯವನ್ನೇ ನಿರೀಕ್ಷಿಸುತ್ತಿದ್ದೇವೆಯೇ ಹೊರತು ಹೊಸ ವೈನ್​ ಶಾಪ್​ಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ಒತ್ತಡಕ್ಕೆ ಒಳಗಾಗದೆ ಸರಾಸರಿ ಆದಾಯ ತರುವುದು ಇಲಾಖೆಯ ಗುರಿಯಾಗಿದೆ ಎಂದರು‌.

ಧರ್ಮಸ್ಥಳ ಜನಜಾಗೃತಿ ವೇದಿಕೆ ಮೂಲಕ ಮದ್ಯವರ್ಜನ ಹಾಗೂ ದುಷ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ಕೆ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನ ಹಾಗೂ ಸೇವೆಗೆ ಸರ್ಕಾರದಿಂದ ಯಾವುದೇ ಅಡ್ಡಿಯಿಲ್ಲ. ಸಮಾಜ ಕಟ್ಟುವ ಸೇವೆಗೆ ನಮ್ಮ ಬೆಂಬಲವಿದೆ. ಅವರವರ ಭಾವನೆಗಳಿಗೆ ಯಾವುದೇ ಧಕ್ಕೆ ತರುವ ಕೆಲಸ ನಮ್ಮಿಂದಾಗದು ಎಂದರು.

ABOUT THE AUTHOR

...view details