ಮಂಗಳೂರು/ಬೆಂಗಳೂರು:ಕಳೆದ ವರ್ಷ ಕೋವಿಡ್ ಕಾರಣದಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ರೈಲು ಮತ್ತು ವಿಮಾನ ಸಂಚಾರ ಸೇವೆ ಕೋವಿಡ್ ನಿಯಮಾವಳಿಗಳೊಂದಿಗೆ ಮತ್ತೆ ಕಾರ್ಯಾರಂಭಿಸಿದೆ. ಕೋವಿಡ್ ಎರಡನೇ ಅಲೆ ಕಾರಣದಿಂದ ಕೆಲವೆಡೆಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ವಯ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶವಿದೆ. ಆದ್ರೆ ಈ ಸಂಚಾರದ ವೇಳೆಯಲ್ಲಿ ಪ್ರಯಾಣಿಕರ ಕೋವಿಡ್ ನಿಯಮ ಪಾಲನೆ ಮೇಲೆ ಹದ್ದಿನ ಕಣ್ಣಿಡುವುದು ಒಂದು ದೊಡ್ಡ ಸವಾಲೇ ಸರಿ. ಹೌದು, ಪ್ರಯಾಣಿಕರು ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಆರ್ಟಿ-ಪಿಸಿಆರ್ ವರದಿ ಹೊಂದುವುದು ಕಡ್ಡಾಯವಾಗಿದ್ದು, ರೈಲ್ವೆ ಮತ್ತು ಏರ್ಪೋರ್ಟ್ ಸಿಬ್ಬಂದಿ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಬೇಕಿದೆ
ಬೆಂಗಳೂರು ರೈಲ್ವೆ ಪೊಲೀಸ್ ಸಿಬ್ಬಂದಿ ಮತ್ತು ಗಗನಸಖಿಯರು ಪ್ರಯಾಣಿಕರನ್ನು ಗಮನಿಸಿ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುತ್ತಾರೆ. ಅದರಲ್ಲೂ ರೈಲ್ವೆ ಪೊಲೀಸ್ ಮತ್ತು ಸಿಬ್ಬಂದಿ ಹೆಚ್ಚು ಪ್ರಯಾಣಿಕರೊಂದಿಗೆ ಸಂವಹನ ನಡೆಸುತ್ತಾರೆ. ಈ ವೇಳೆ ಹಲವರು ಸೋಂಕಿಗೊಳಗಾದ ಉದಾಹರಣೆಗಳಿವೆ.