ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಮೇಲ್ಸೇತುವೆಗೆ ಇಂದಿರಾ, ರಾಜೀವ್ ಗಾಂಧಿ ಹೆಸರಿಡುತ್ತಿದ್ದರು: ಕಟೀಲ್
ಯಲಹಂಕ ಮೇಲ್ಸೇತುವೆಗೆ ವಿ.ಡಿ. ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ಯ್ರ ಹೋರಾಟಗಾರರಿಗೆ ಮಾಡುವ ಅವಮಾನ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು: ದೇಶದ ಸ್ವಾತಂತ್ರ್ಯ ಹಾಗೂ ಅಖಂಡತೆಗಾಗಿ ಬಲಿದಾನಗೈದ ವಿ.ಡಿ. ಸಾವರ್ಕರ್ ಬಗ್ಗೆ ಗೊತ್ತಿಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರು ಬಾಯಿಗೆ ಬಂದಂತೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ನಡುವೆ ತಾರತಮ್ಯ ಮಾಡುತ್ತಿರುವುದು ದುರಾದೃಷ್ಟಕರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಸಮಾಧಾನ ಹೊರಹಾಕಿದರು.
ಯಲಹಂಕ ಮೇಲ್ಸೇತುವೆಗೆ ವಿ.ಡಿ. ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ಯ್ರ ಹೋರಾಟಗಾರರಿಗೆ ಮಾಡುವ ಅವಮಾನ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸರಣಿ ಟ್ವೀಟ್ ಮಾಡಿದ ನಳಿನ್ ಕುಮಾರ್ ಕಟೀಲ್, ಸಾವರ್ಕರ್ ಬಗ್ಗೆ ಓದಿ ನಂತರ ಮಾತನಾಡಿ. ಯಾವಾಗಲೂ ಒಂದೇ ಕುಟುಂಬದ ಹೆಸರನ್ನಿಟ್ಟು ಅಭ್ಯಾಸವಾದವರಿಗೆ ಸಾವರ್ಕರ್ ಹೆಸರು ಕೇಳುವಾಗ ಆಶ್ಚರ್ಯವಾಗುವುದು ಸಹಜ. ಒಂದು ವೇಳೆ ಈಗ ಕಾಂಗ್ರೆಸ್ ಸರ್ಕಾರ ಇದ್ದಲ್ಲಿ ಖಂಡಿತಾ ಆ ಮೇಲ್ಸೇತುವೆಗೆ ಇಂದಿರಾ ಗಾಂಧಿ ಅಥವಾ ರಾಜೀವ ಗಾಂಧಿ ಹೆಸರು ಇಡಲಾಗುತ್ತಿತ್ತು ಎನ್ನುವುದು ಲೋಕ ತಿಳಿದ ಸತ್ಯ ಎಂದು ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನೆಹರೂ ತಾರಾಲಯಕ್ಕೆ ಹೆಸರಿಡುವಾಗ ನೆಹರೂ ನಮ್ಮ ರಾಜ್ಯದವರಲ್ಲ. ಶಿಕ್ಷಣ ಸಂಸ್ಥೆಗಳಿಗೆ ರಾಜೀವ ಗಾಂಧಿ ಹೆಸರಿಡುವಾಗ ಅವರು ನಮ್ಮವರಲ್ಲ ಎಂದು ಬಿಜೆಪಿ ನಾಯಕರಿರಲಿ ಅಥವಾ ನಮ್ಮ ಕಾರ್ಯಕರ್ತರು ಹೇಳಿಲ್ಲ. ಅವರವರ ಯೋಗ್ಯತೆಗೆ ತಕ್ಕಂತೆ ಯೋಚನೆಗಳಿರೋದು ಸಹಜ ಎಂದು ಟ್ವೀಟ್ ಮೂಲಕ ನಳಿನ್ ವ್ಯಂಗ್ಯವಾಡಿದ್ದಾರೆ.
Last Updated : May 28, 2020, 9:38 AM IST