ಮಂಗಳೂರು:ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ವೀರರಾಣಿ ಅಬ್ಬಕ್ಕ'ಳ ಹೆಸರಿಡಬೇಕೆಂಬ ಒತ್ತಾಯವನ್ನು ನಾವು ಸಾಕಷ್ಟು ವರ್ಷಗಳಿಂದ ಮಾಡುತ್ತಿದ್ದರೂ, ಇನ್ನೂ ಆ ಕನಸು ಈಡೇರಿಲ್ಲ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಾಮಕರಣ ಬದಲಾವಣೆ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಗ್ಗೆ ಅಂದಿನ ಸಂಸದ ಧನಂಜಯ ಕುಮಾರ್ ಅವರು ಲೋಕಸಭೆಯಲ್ಲಿ, ಶಾಸಕಿಯಾಗಿದ್ದ ಶಕುಂತಲಾ ಶೆಟ್ಟಿಯವರು ವಿಧಾನಸಭೆಯಲ್ಲಿ ಹಾಗೂ ಪರಿಷತ್ ಸದಸ್ಯರಾಗಿದ್ದ ಐವನ್ ಡಿಸೋಜ ವಿಧಾನ ಪರಿಷತ್ನಲ್ಲಿ ಪ್ರಸ್ತಾಪ ಮಾಡಿದ್ದರು.