ಬಂಟ್ವಾಳ: ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದವರಲ್ಲಿ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ (24) ಸಹ ಸೇರಿದ್ದಾರೆ.
ತಲಕಾವೇರಿ ದುರಂತದಲ್ಲಿ ಬಂಟ್ವಾಳ ತಾಲೂಕಿನ ಯುವಕ ನಾಪತ್ತೆ!
ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದವರಲ್ಲಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ (24) ಸಹ ಸೇರಿದ್ದಾರೆ.
Ravikiran of Bantwala
ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರಾಮಕೃಷ್ಣ ರಾವ್ ಮತ್ತು ರೇಣುಕಾ ದಂಪತಿ ಪುತ್ರ ರವಿಕಿರಣ್ ಸುಮಾರು ಎರಡು ವರ್ಷಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರು ಹುಟ್ಟೂರಿಗೆ ಆಗಮಿಸಿ ಮೇ ಅಂತ್ಯದ ವೇಳೆ ತಲಕಾವೇರಿಗೆ ಮರಳಿದ್ದರು. ಪೌರೋಹಿತ್ಯ ಸಹಾಯಕ ವೃತ್ತಿಯನ್ನು ಮಾಡುತ್ತಿದ್ದ ಅವರು ರಾವ್ ದಂಪತಿಯ ಅವಳಿ ಮಕ್ಕಳಲ್ಲಿ ಒಬ್ಬರು. ಸದ್ಯ ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದವರ ಪೈಕಿ ಇವರು ಸಹ ಸೇರಿದ್ದಾರೆ.