ಕರ್ನಾಟಕ

karnataka

ETV Bharat / state

ರೇಶನ್ ವಿತರಣೆಗೆ ಗುಡ್ಡ ಹತ್ತಿದ ಸಿಬ್ಬಂದಿ.. ಕಾಡಿನಲ್ಲಿ ಅಕ್ಕಿಗಾಗಿ ಕಾಯುತ್ತಿರುವ ಪಡಿತದಾರರು - ಸುಬ್ರಹ್ಮಣ್ಯದಲ್ಲಿ ರೇಶನ್ ವಿತರಣೆಗೆ ಗುಡ್ಡ ಹತ್ತಿದ ಸಿಬ್ಬಂದಿ

ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಜನರ ಸಂಕಷ್ಟವನ್ನು ಮನಗಂಡು ಲ್ಯಾಪ್‌ಟಾಪ್ ಹಿಡಿದುಕೊಂಡು ಗುಡ್ಡಕ್ಕೆ ಹತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ..

Ration distributors  climbed hill
ರೇಶನ್ ವಿತರಣೆಗೆ ಗುಡ್ಡ ಹತ್ತಿದ ಸಿಬ್ಬಂದಿ

By

Published : Apr 30, 2021, 2:20 PM IST

ಸುಬ್ರಹ್ಮಣ್ಯ :ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವ ಅಕ್ಕಿಗಾಗಿ ಗ್ರಾಮೀಣ ಭಾಗದ ಜನರು ಪರದಾಡುವ ದೃಶ್ಯ ಸಾಮಾನ್ಯವಾಗಿದೆ.

ರೇಶನ್ ನೀಡಲು ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಲ್ಯಾಪ್‌ಟಾಪ್​ನೊಂದಿಗೆ ಗುಡ್ಡ ಹತ್ತಿದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಕೊಂಬಾರು ಗ್ರಾಮದಲ್ಲಿ ನಡೆದಿದೆ.

ಕಾಡಿನಲ್ಲಿ ಅಕ್ಕಿಗಾಗಿ ಕಾಯುತ್ತಿರುವ ಪಡಿತರದಾರರು..

ಸರ್ಕಾರದ ಆದೇಶದಂತೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ ವಸ್ತುಗಳ ಖರೀದಿಗೆ ಅವಕಾಶವಿದ್ದರೂ, ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ನೆಟ್‌ವರ್ಕ್ ಇಲ್ಲದೇ ಪಡಿತರ ದೊರೆತಿಲ್ಲ. ಬಿಎಸ್ಎನ್ಎಲ್ ಹಾಗೂ ಏರ್ಟೆಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಬಂದ ಗ್ರಾಹಕರು ಪಡಿತರ ಸಿಗದೆ ಸಂಕಷ್ಟಕೀಡಾಗಿದ್ದಾರೆ.

ರೇಶನ್ ವಿತರಣೆಗೆ ಗುಡ್ಡ ಹತ್ತಿದ ಸಿಬ್ಬಂದಿ..

ಇತ್ತ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಜನರ ಸಂಕಷ್ಟವನ್ನು ಮನಗಂಡು ಲ್ಯಾಪ್‌ಟಾಪ್ ಹಿಡಿದುಕೊಂಡು ಗುಡ್ಡಕ್ಕೆ ಹತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ.

ABOUT THE AUTHOR

...view details