ಮಂಗಳೂರು: ಕಡಲತೀರಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಆ ದುಷ್ಕೃತ್ಯದ ವಿಡಿಯೋವನ್ನು ಸೆರೆಹಿಡಿದು ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮೀನು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾಝ್ ಅಹಮ್ಮದ್(30) ಎಂಬಾತ ಬಂಧಿತ ಆರೋಪಿ.
ಆರೋಪಿಯು ಜುಲೈ 27ರಂದು ಎನ್ಐಟಿಕೆ ಬೀಚ್ಗೆ ಸಹಪಾಠಿಯೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿಯ ಸಹಪಾಠಿಯನ್ನು ಆರೋಪಿ ಮುನಾಝ್ ಅಹಮ್ಮದ್ ಹೆದರಿಸಿ ಓಡಿಸಿ ದುಷ್ಕೃತ್ಯ ಮೆರೆದಿದ್ದಾನೆ. ಅಲ್ಲದೆ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ಬಳಿಕ ಅದನ್ನು ತೋರಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ದೂರಲಾಗಿದೆ.