ಕರ್ನಾಟಕ

karnataka

ETV Bharat / state

ಮನೆ ಕೆಲಸಕ್ಕಿದ್ದ ಯುವತಿ ಮೇಲೆ ಅತ್ಯಾಚಾರ ಆರೋಪ: ಮನೆ ಮಾಲೀಕನ ಬಂಧನ - ಮಂಗಳೂರು

ಮನೆಯಲ್ಲಿ ಕೆಲಸಕ್ಕಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ, ಯುವತಿಗೆ ನಿದ್ರೆ ಮಾತ್ರೆ ನೀಡಿ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಬೆದರಿಕೆ ಒಡ್ಡಿದ್ದಾನೆಂದು ತಿಳಿದು ಬಂದಿದೆ.

ಅತ್ಯಾಚಾರ ಆರೋಪ ಮನೆ ಮಾಲೀಕನ ಬಂಧನ

By

Published : Jun 16, 2019, 3:27 AM IST

ಮಂಗಳೂರು: ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಪಾಂಡೇಶ್ವರ ಸುಭಾಷ್‌ನಗರ ನಿವಾಸಿ ರವಿ ಉಚ್ಚಿಲ್ (40) ಬಂಧಿತ ಆರೋಪಿ.

ಪ್ರಕರಣ ವಿವರ:
ನಗರದ ಕಂಕನಾಡಿಯಲ್ಲಿರುವ ಗ್ಯಾಸ್ ಕೊ ಗ್ಯಾಸ್ ರಿಪೇರಿ ಮಾಡುವ ಶಾಪ್ ಮಾಲೀಕನಾದ ಆರೋಪಿ ರವಿ ಉಚ್ಚಿಲ್‌, ಮನೆಯಲ್ಲಿ ಸಂತ್ರಸ್ಥ ಯುವತಿ ಕಳೆದ ಏಳು ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಳು. ಈಕೆಯನ್ನು ರವಿ ಉಚ್ಚಿಲ್ ಲೈಂಗಿಕಕ್ರಿಯೆಗೆ ಬಳಸಿಕೊಳ್ಳುತ್ತಿದ್ದುದಲ್ಲದೆ, ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

ಅಲ್ಲದೆ ಯುವತಿಗೆ ನಿದ್ರೆ ಮಾತ್ರೆ ನೀಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಬೆದರಿಕೆಯನ್ನು ಆರೋಪಿ ಒಡ್ಡಿದ್ದಾನೆಂದು ತಿಳಿದುಬಂದಿದೆ. ಸಂತ್ರಸ್ಥೆ ಇತ್ತೀಚೆಗೆ ಗರ್ಭಿಣಿ ಕೂಡ ಆಗಿದ್ದು, ವೈದ್ಯರೊಬ್ಬರ ಬಳಿ ಈತ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಈ ಕೃತ್ಯದ ಬಗ್ಗೆ ಯುವತಿ ತನ್ನ ಮನೆಯವರಿಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ABOUT THE AUTHOR

...view details