ಕರ್ನಾಟಕ

karnataka

ETV Bharat / state

ಸಿಎ ಪರೀಕ್ಷೆಯಲ್ಲಿ ದೇಶದಲ್ಲೇ 2ನೇ ರ‍್ಯಾಂಕ್‌ ಪಡೆದ ಮಂಗಳೂರಿನ ರಮ್ಯಶ್ರೀ - CA exam result

ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವು 2022ರ ನವೆಂಬರ್​ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆನ್ಸಿ ಅಂತಿಮ ಪರೀಕ್ಷೆ ಮತ್ತು ಸಿಎ ಇಂಟರ್ಮೀಡಿಯೇಟ್‌ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ramyashree
ರಮ್ಯಶ್ರೀ

By

Published : Jan 11, 2023, 2:33 PM IST

ಸಿಎ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್‌ ಸಿಕ್ಕಿರುವ ಕುರಿತು ಅಭಿಪ್ರಾಯ ಹಂಚಿಕೊಂಡ ರಮ್ಯಶ್ರೀ

ಮಂಗಳೂರು: ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾವು (ಚಾರ್ಟರ್ಡ್ ಅಕೌಂಟೆನ್ಸಿ) ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಿದೆ. ಅಖಿಲ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟೆಂಟ್ಸ್ ಪರೀಕ್ಷೆಯಲ್ಲಿ ಮಂಗಳೂರು ಸಮೀಪದ ಹೊಸಬೆಟ್ಟುವಿನ ರಮ್ಯಶ್ರೀ ಅವರು ದೇಶದಲ್ಲೇ ಎರಡನೇ ರ‍್ಯಾಂಕ್‌ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಒಟ್ಟು 800 ರಲ್ಲಿ 617 ಅಂಕಗಳನ್ನು ಪಡೆದಿದ್ದಾರೆ.

ಎಲ್‌ಐಸಿ ಉದ್ಯೋಗಿ ರಮೇಶ್ ಅವರ ಪುತ್ರಿಯಾಗಿರುವ ರಮ್ಯಶ್ರೀ ಅವರು ಸುರತ್ಕಲ್​ನ ವಿದ್ಯಾದಾಯಿನಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು. ಬಳಿಕ ಎಸ್‌ಎಸ್‌ಎಲ್‌ಸಿಯಲ್ಲಿ ಮೂರನೇ ರ‍್ಯಾಂಕ್‌​ ಪಡೆದರು. ಪದವಿ ಜತೆಗೆ ಸಿಎ ಅಖಿಲ ಭಾರತ ಇಂಟರ್ ಪರೀಕ್ಷೆಯಲ್ಲಿ 16ನೇ ರ‍್ಯಾಂಕ್‌ ಗಳಿಸಿದ್ದರು. ಜೊತೆಗೆ ಮಂಗಳೂರಿನ ಕಾಮತ್ ಆ್ಯಂಡ್ ರಾವ್‌ ಸಂಸ್ಥೆಯಲ್ಲಿ ದಯಾಕರ ರಾವ್ ಅವರಿಂದ ಮತ್ತು ಇತ್ತೀಚೆಗೆ ಎಂಆರ್‌ಪಿಎಲ್‌ನಲ್ಲಿ ತರಬೇತಿ ಪಡೆದಿದ್ದಾರೆ.

ತಮ್ಮ ಸಾಧನೆಯ ಕುರಿತು ಮಾತನಾಡಿದ ರಮ್ಯಶ್ರೀ, ನನ್ನ ಕುಟುಂಬದ ಎಲ್ಲ ಸದಸ್ಯರ ಮತ್ತು ಹಿರಿಯಣ್ಣನ ಪ್ರೋತ್ಸಾಹ, ಗುರು, ಹಿರಿಯರ ಆಶೀರ್ವಾದದಿಂದ ರ‍್ಯಾಂಕ್‌ ಪಡೆಯಲು ಸಾಧ್ಯವಾಗಿದೆ. ಮುಂದೆ ಯಾವುದಾದರೂ ಸಂಸ್ಥೆಯಲ್ಲಿ ದುಡಿಯುತ್ತೇನೆ. ಎರಡನೇ ರ‍್ಯಾಂಕ್‌ ಪಡೆಯಲು ನನ್ನ ಮೇಲೆ ನನಗೆ ಬಹಳ ವಿಶ್ವಾಸವಿತ್ತು ಎಂದಿದ್ದಾರೆ.

ಸಿಎ ಫೈನಲ್‌ ಪರೀಕ್ಷೆಯಲ್ಲಿ ಶೇಕಡಾ 11.09 ರಷ್ಟು ಅಭ್ಯುರ್ಥಿಗಳು ಪಾಸ್​: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಬಿಡುಗಡೆ ಮಾಡಿದ ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಶೇಕಡಾ 12.72 ಅಭ್ಯರ್ಥಿಗಳು ಉತ್ತೀರ್ಣರಾದರೆ, ಸಿಎ ಫೈನಲ್‌ ಪರೀಕ್ಷೆ ಪರೀಕ್ಷೆಯಲ್ಲಿ ಶೇಕಡಾ 11.09 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ:ಸಿಎ ಪರೀಕ್ಷೆ ಪಾಸ್​ ಮಾಡಿದ ಜವಳಿ ಕೆಲಸಗಾರನ ಮಗ, ಸರ್ಕಾರಿ ಶಾಲೆ ವಿದ್ಯಾರ್ಥಿನಿ

ಯಾವಾಗ ಪರೀಕ್ಷೆ ನಡೆದಿದ್ದು?: ಐಸಿಎಐ ಚಾರ್ಟರ್ಡ್ ಅಕೌಂಟೆನ್ಸಿ ಫೌಂಡೇಶನ್ ಅಂತಿಮ ಪರೀಕ್ಷೆಗಳನ್ನು ನವೆಂಬರ್ 1 ರಿಂದ ನವೆಂಬರ್ 16, 2022 ರವರೆಗೆ ನಡೆಸಲಾಗಿತ್ತು. ಹಾಗೆಯೇ ಚಾರ್ಟರ್ಡ್ ಅಕೌಂಟೆನ್ಸಿ ಇಂಟರ್ಮೀಡಿಯೇಟ್‌ ಪರೀಕ್ಷೆಯನ್ನು ನವೆಂಬರ್ 2 ರಿಂದ ನವೆಂಬರ್ 17, 2022 ರವರೆಗೆ ಮಾಡಲಾಗಿತ್ತು. ಈ 2 ಎಕ್ಸಾಂ ಅನ್ನು ಆಫ್‌ಲೈನ್ ಮೋಡ್‌ನಲ್ಲಿ ನಡೆಸಲಾಗಿತ್ತು.

ಇನ್ನು 2021 ರಲ್ಲಿ ಮಂಗಳೂರಿನ ಮಂಗಳೂರಿನ ರೋಸಿ ಮಾರಿಯಾ ಡಿಸಿಲ್ವಾ ಮತ್ತು ರಫರ್ಟ್ ಡಿಸಿಲ್ವಾ ದಂಪತಿಯ ಪುತ್ರಿಯಾಗಿರುವ ರುತ್ ಕ್ಲ್ಯಾರ್ ಡಿಸಿಲ್ವ ರಾಷ್ಟ್ರಮಟ್ಟದಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ್ದರು. ಇದೀಗ ಛಲ ಬಿಡದೆ ಇದಿ ಇದೀಗ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಮಂಗಳೂರಿನ ರಮ್ಯಶ್ರೀ ಅದ್ಭುತ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ಸಿಎ ಪರೀಕ್ಷೆ: ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ರ‍್ಯಾಂಕ್

ABOUT THE AUTHOR

...view details