ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಡೆಂಗ್ಯು ವ್ಯಾಪಿಸಿದ್ದರೂ ಸ್ಥಳೀಯ ಬಿಜೆಪಿ ಶಾಸಕರು ರೆಸಾರ್ಟ್ ವಾಸ್ತವ್ಯದಲ್ಲಿದ್ದು ಅವರಿಗೆ ಧಿಕ್ಕಾರ ಹೇಳಬೇಕಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಸಿದ್ರು.
ಡೆಂಗ್ಯು ಹಾವಳಿ ನಡುವೆ ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ: ರಮಾನಾಥ ರೈ ಆಕ್ರೋಶ - ರಮಾನಾಥ ರೈ
ಮಂಗಳೂರಿನಲ್ಲಿ ಡೆಂಗ್ಯು ಹಾವಳಿ ನಡುವೆ ರೆಸಾರ್ಟ್ ವಾಸ್ತವ್ಯದಲ್ಲಿರುವ ಸ್ಥಳೀಯ ಬಿಜೆಪಿ ಶಾಸಕರಿಗೆ ಧಿಕ್ಕಾರ ಹೇಳಬೇಕಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮಾನಾಥ ರೈ ಆಕ್ರೋಶ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ, ಮಂಗಳೂರಿನಲ್ಲಿ ಜನರು ಡೆಂಗ್ಯು ಖಾಯಿಲೆಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಸಾಕಷ್ಟು ಮಂದಿ ಡೆಂಗ್ಯು ಬಾಧಿತರಾಗಿದ್ದು ಕೆಲವರು ಜೀವ ಕಳೆದುಕೊಂಡಿದ್ದಾರೆ. ಆದರೆ, ಸ್ಥಳೀಯ ಶಾಸಕರು ಸರ್ಕಾರ ಅಸ್ಥಿರಗೊಳಿಸಲು ರೆಸಾರ್ಟ್ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ರು.