ದಕ್ಷಿಣಕನ್ನಡ:ಕೊರೊನಾ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ದಿನಬಳಕೆ ವಸ್ತುಗಳನ್ನು ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ದಿನಬಳಕೆ ಸಾಮಾಗ್ರಿ ನೀಡಿದ ರಮಾನಾಥ ರೈ - ಆಶಾ ಕಾರ್ಯಕರ್ತೆಯರಿಗೆ ಗೌರವ
ಮಾಜಿ ಸಚಿವ ಬಿ.ರಮಾನಾಥ ರೈ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ಸಜೀಪಮುನ್ನೂರು, ಮಾಣಿ, ಗೋಳ್ತಮಜಲು, ಕೊಳ್ನಾಡು ಜಿ.ಪಂ. ಕ್ಷೇತ್ರಗಳ ಆಶಾ ಕಾರ್ಯಕರ್ತೆಯರಿಗೆ ದಿನ ಬಳಕೆ ಸಾಮಾಗ್ರಿಗಳನ್ನ ನೀಡಿ ಗೌರವಿಸಿದರು.
ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಸಿದ ರಮಾನಾಥ ರೈ
ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ಸಜೀಪಮುನ್ನೂರು, ಮಾಣಿ, ಗೋಳ್ತಮಜಲು, ಕೊಳ್ನಾಡು ಜಿ.ಪಂ. ಕ್ಷೇತ್ರಗಳ ಆಶಾ ಕಾರ್ಯಕರ್ತೆಯರು ಸಾಮಾಗ್ರಿಗಳನ್ನು ಸ್ವೀಕರಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮೊಹಮ್ಮದ್, ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ಮತ್ತಿತರರು ಉಪಸ್ಥಿತರಿದ್ದರು.