ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಜನ್ಮದಿನವನ್ನು ಬಂಟ್ವಾಳ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ರಮಾನಾಥ ರೈ ಹುಟ್ಟುಹಬ್ಬ.... ವೃದ್ದಾಶ್ರಮದಲ್ಲಿ ಬರ್ತ್ಡೇ ಆಚರಣೆ, ಕಾರ್ಯಕರ್ತರಿಂದ ರಕ್ತದಾನ - ramanath rai birthday celebration
ಮಾಜಿ ಸಚಿವ ಬಿ.ರಮಾನಾಥ ರೈ ಅವರ ಜನ್ಮದಿನಾಚರಣೆ ಹಿನ್ನೆಲೆ ಬಂಟ್ವಾಳ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಲ್ಲಿ ರಕ್ತದಾನ ಮಾಡುವ ಮೂಲಕ ಆಚರಿಸಿದ್ರು. ಬರ್ತ್ ಡೇ ಪ್ರಯುಕ್ತ ಬಿ.ರಮಾನಾಥ ರೈಮೇರಮಜಲುವಿನ ಶ್ರೀ ಮಾತಾ ಲಕ್ಷ್ಮಣಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ಆಶ್ರಮವಾಸಿಗಳೊಂದಿಗೆ ಸಹಭೋಜನವನ್ನು ರೈ ನಡೆಸಿದರು.
![ರಮಾನಾಥ ರೈ ಹುಟ್ಟುಹಬ್ಬ.... ವೃದ್ದಾಶ್ರಮದಲ್ಲಿ ಬರ್ತ್ಡೇ ಆಚರಣೆ, ಕಾರ್ಯಕರ್ತರಿಂದ ರಕ್ತದಾನ ramanath rai birthday celebration in orphanage](https://etvbharatimages.akamaized.net/etvbharat/prod-images/768-512-8789259-969-8789259-1600006793929.jpg)
ಸ್ವತಃ ರೈ ಅವರು ಮಧ್ಯಾಹ್ನ ಅನಾಥಾಶ್ರಮದಲ್ಲಿ ಕೇಕ್ ಕಟ್ ಮಾಡಿದರೆ, ಕಾರ್ಯಕರ್ತರು ಅಲ್ಲಲ್ಲಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಈ ವೇಳೆ ಮಾತನಾಡಿದ ರೈ, ತಮ್ಮ ಹುಟ್ಟುಹಬ್ಬ ಸಂದರ್ಭ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಕಾರ್ಯಕರ್ತರು ನನ್ನ ಆಶಯವನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಮನುಷ್ಯ ಮನುಷ್ಯರೆಲ್ಲರೂ ಒಂದೇ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಸುಮಾರು 40 ವರ್ಷಗಳ ಸುದೀರ್ಘ ಕಾಲ ರಾಜಕೀಯ ಜೀವನ ನಡೆಸಿರುವ ಅನುಭವಿಯಾಗಿರುವ ರೈ, ಕಾಂಗ್ರೆಸ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಇದ್ದಂತೆ. ಈ ಹಿನ್ನೆಲೆ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಶಿಬಿರ ಏರ್ಪಡಿಸಿದ್ದರು. ಮೇರಮಜಲುವಿನ ಶ್ರೀ ಮಾತಾ ಲಕ್ಷ್ಮಣಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ಆಶ್ರಮವಾಸಿಗಳೊಂದಿಗೆ ಸಹಭೋಜನವನ್ನು ರೈ ನಡೆಸಿದರು. ಕಾಂಗ್ರೆಸ್ ಪ್ರಮುಖರಾದ ಮಿಥುನ್ ರೈ, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಶಾಲೆಟ್ ಪಿಂಟೋ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಪ್ರಶಾಂತ್ ಕುಲಾಲ್, ಇಬ್ರಾಹಿಂ ನವಾಜ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.