ಪುತ್ತೂರು: ವಿಕಲಚೇತನ ಮಕ್ಕಳಿಗೆ ಅನುಕಂಪ, ಸಹಾನುಭೂತಿ ತೋರಿಸಿದರೆ ಸಾಲದು, ನಿಜಾರ್ಥದಲ್ಲಿ ಅವರ ಕೆಲಸಗಳನ್ನು ಮಾಡುವುದು ಅವರಿಗೆ ಕೊಡುವ ಅನುಕಂಪ. ಆ ಕೆಲಸವನ್ನು ಅಣ್ಣಪ್ಪ ದಂಪತಿ ಮಾಡುತ್ತಿರುವುದು, ಅವರ ಕಷ್ಟ ಕಾರ್ಪಣ್ಯದಲ್ಲಿ ಭಾಗಿಯಾಗತಕ್ಕದ್ದು ದೊಡ್ಡ ಸಾಧನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬನ್ನೂರಿನ ಪ್ರಜ್ಞಾ ವಸತಿ ಕೇಂದ್ರಕ್ಕೆ ರಮಾನಾಥ ರೈ ಭೇಟಿ: ಹುಟ್ಟುಹಬ್ಬ ಆಚರಣೆ - Former minister Ramanath Rai
ಪುತ್ತೂರು ತಾಲೂಕು ಬನ್ನೂರಿನ ಪ್ರಜ್ಞಾ ಮಾನಸಿಕ ಭಿನ್ನ ಸಾಮರ್ಥ್ಯ ತರಬೇತಿ ಮತ್ತು ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ.ರಮಾನಾಥ ರೈ, ವಿಕಲಚೇತನ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
![ಬನ್ನೂರಿನ ಪ್ರಜ್ಞಾ ವಸತಿ ಕೇಂದ್ರಕ್ಕೆ ರಮಾನಾಥ ರೈ ಭೇಟಿ: ಹುಟ್ಟುಹಬ್ಬ ಆಚರಣೆ Ramanath Rai birthday celebration](https://etvbharatimages.akamaized.net/etvbharat/prod-images/768-512-8803938-502-8803938-1600136226328.jpg)
ಸೋಮವಾರ ಪುತ್ತೂರು ತಾಲೂಕು ಬನ್ನೂರಿನ ಪ್ರಜ್ಞಾ ಮಾನಸಿಕ ಭಿನ್ನ ಸಾಮರ್ಥ್ಯ ತರಬೇತಿ ಮತ್ತು ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ವಿಕಲಚೇತನ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿ ಬಳಿಕ ಮಾತನಾಡಿದರು. ಯಾರೋ ಒಬ್ಬರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರೆ ನಮಗೆ ಅದು ಧರ್ಮ ಮತ್ತು ಕರ್ತವ್ಯ ಅನ್ನಿಸುತ್ತದೆ. ಮುಂದಿನ ದಿನಗಳಲ್ಲಿ ಅವರಿಗೆ ಅನುಕೂಲವಾಗತಕ್ಕಂತಹ ವಾತಾವರಣ ನಿರ್ಮಿಸುವ ಸಹಕಾರ ನಮ್ಮಿಂದ ಸಿಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಈ ಹಿಂದೆ ಈ ಕೇಂದ್ರಕ್ಕೆ ಭೇಟಿ ನೀಡಿದಾಗ ಇಂತಹ ಕೆಲಸ ನಡೆಯುತ್ತಿದೆ ಎಂಬುದು ಆಶ್ಚರ್ಯವಾಗಿತ್ತು. ಬಳಿಕದ ದಿನಗಳಲ್ಲಿ ಈ ಸಂಸ್ಥೆಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸುವ ಪ್ರಯತ್ನ ಸಾಗಿದೆ. ಇದೀಗ ಬನ್ನೂರಿನಲ್ಲೇ ಸುಮಾರು 40 ಸೆಂಟ್ಸ್ ಜಾಗವನ್ನು ನೋಡಿದ್ದು, ಈ ಜಾಗವನ್ನು ಅವರಿಗೆ ಒದಗಿಸುವ ಎಲ್ಲಾ ಪ್ರಯತ್ನಗಳು ನಡೆಯಬೇಕು ಎಂದರು.