ಕರ್ನಾಟಕ

karnataka

ETV Bharat / state

ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ - ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವುದು ಮತ್ತು ಕುಟುಂಬದ ನಿರ್ವಹಣೆ ಅಗತ್ಯ ಸಹಾಯ ಮಾಡುವುದು ಹಿಂದೂ ಸಮಾಜದ ಧ್ಯೇಯವಾಗಿದೆ ಶಾಸಕ ರಾಜೇಶ್ ನಾಯ್ಕ್

ಕುಟುಂಬದ ಆಧಾರ ಸ್ತಂಭವಾಗಿ, ಕುಟುಂಬದ ನಿರ್ವಹಣೆ ಜವಾಬ್ದಾರಿಯನ್ನು ಹೊಂದಿದ್ದ ಅವನ ಅಗಲಿಕೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಗಬಾರದು ಎಂದು ಕುಟುಂಬಕ್ಕೆ ಸಹಾಯ ಮಾಡಿದ್ದಾರೆ..

Rajesh nayak
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

By

Published : Feb 22, 2022, 3:51 PM IST

ಬಂಟ್ವಾಳ :ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿವಮೊಗ್ಗ ಜಿಲ್ಲೆಯ ಹಿಂದೂ ಸಂಘಟನೆಯ ಪ್ರಮುಖ ಯುವ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ 1 ಲಕ್ಷ ರೂ. ನೆರವು ಹಸ್ತಾಂತರಿಸಿದ್ದಾರೆ.

ಸಾವಿಗೆ ನ್ಯಾಯ ಸಿಗಬೇಕು. ಆತನ ಕೊಲೆ ಮಾಡಿದ ಆರೋಪಿಗಳ ಜೊತೆ, ಅದರ ಹಿಂದಿರುವ ಶಕ್ತಿಗಳನ್ನ ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಒತ್ತಾಯಿಸಿದ್ದಾರೆ.

ಕುಟುಂಬದ ಆಧಾರ ಸ್ತಂಭವಾಗಿ, ಕುಟುಂಬದ ನಿರ್ವಹಣೆ ಜವಾಬ್ದಾರಿಯನ್ನು ಹೊಂದಿದ್ದ ಅವನ ಅಗಲಿಕೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಗಬಾರದು ಎಂದು ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವುದು ಮತ್ತು ಕುಟುಂಬದ ನಿರ್ವಹಣೆ ಅಗತ್ಯ ಸಹಾಯ ಮಾಡುವುದು ಹಿಂದೂ ಸಮಾಜದ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಅವರ ಬ್ಯಾಂಕ್ ಖಾತೆಯಿಂದ ರೂ. ಒಂದು ಲಕ್ಷ ಹಣವನ್ನು ಹರ್ಷ ಅವರ ಕುಟುಂಬದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾಗಿ ಶಾಸಕರು ತಿಳಿಸಿದ್ದಾರೆ.

ಇದನ್ನೂ ಓದಿ:ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ ನಡೆಸುತ್ತಿದ್ದೇವೆ: ಎಡಿಜಿಪಿ ಪ್ರತಾಪ್​​​ ರೆಡ್ಡಿ

For All Latest Updates

TAGGED:

ABOUT THE AUTHOR

...view details