ಮಂಗಳೂರು:ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಏಳುವ ಸಾಧ್ಯತೆ ಇರುವುದರಿಂದ ಮಂಗಳೂರಿನಲ್ಲಿ ಸ್ವಲ್ಪ ಹೊತ್ತು ಮಳೆ ಸುರಿದಿದೆ.
ವಾಯುಭಾರ ಕುಸಿತ: ಮಂಗಳೂರಲ್ಲಿ ಗುಡುಗು ಸಿಡಿಲು ಸಹಿತ ಮಳೆ - ಮಂಗಳೂರಲ್ಲಿ ಮಳೆ ಮುನ್ಸೂಚನೆ
ಮಂಗಳೂರಲ್ಲಿ ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ. 9 ಗಂಟೆಯ ಹೊತ್ತಿಗೆ ಮಿಂಚು, ಸಿಡಿಲು ಕಾಣಿಸಿಕೊಳ್ಳಲಾರಂಭಿಸಿದ್ದು ಬಳಿಕ ಸ್ವಲ್ಪ ಮಟ್ಟಿನ ಮಳೆ ಸುರಿಯಲಾರಂಭಿಸಿದೆ. ಆದರೆ ನೀರು ಹರಿದು ಹೋಗುವಷ್ಟು ಸುರಿದ ಮಳೆ 10-15 ನಿಮಿಷಗಳಲ್ಲಿ ನಿಂತಿದೆ. ಗುಡುಗು ಸಿಡಿಲು ಕಾಣಿಸಿಕೊಂಡ ತಕ್ಷಣ ಕರೆಂಟ್ ಕೂಡಾ ಹೋಗಿದೆ.
rain
ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ. 9 ಗಂಟೆಯ ಹೊತ್ತಿಗೆ ಮಿಂಚು, ಸಿಡಿಲು ಕಾಣಿಸಿಕೊಳ್ಳಲಾರಂಭಿಸಿದ್ದು ಬಳಿಕ ಸ್ವಲ್ಪ ಮಟ್ಟಿನ ಮಳೆ ಸುರಿಯಲಾರಂಭಿಸಿದೆ. ಆದರೆ ನೀರು ಹರಿದು ಹೋಗುವಷ್ಟು ಸುರಿದ ಮಳೆ 10-15 ನಿಮಿಷಗಳಲ್ಲಿ ನಿಂತಿದೆ. ಗುಡುಗು ಸಿಡಿಲು ಕಾಣಿಸಿಕೊಂಡ ತಕ್ಷಣ ಕರೆಂಟ್ ಕೂಡಾ ಹೋಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಮೇ 16ರಂದು ಚಂಡಮಾರುತ ಏಳುವ ಸಾಧ್ಯತೆ ಇದೆ. ಇದಕ್ಕೆ ತೌಕ್ತೆ ಎಂದು ಹೆಸರಿಸಲಾಗಿದ್ದು, ಇದರಿಂದ ಮೇ 13ರಿಂದಲೇ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.