ಕರ್ನಾಟಕ

karnataka

ETV Bharat / state

ರೈಲಿನಲ್ಲಿ ಅಮಲು ಪದಾರ್ಥ ನೀಡಿ ಕಳ್ಳತನ... ಇಬ್ಬರು ಆರೋಪಿಗಳ ಬಂಧನ - railway station theives arrested in manglore

ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಟೀಗೆ ಅಮಲು ಬರುವ ಪದಾರ್ಥ ಬೆರೆಸಿ ಪ್ರಯಾಣಿಕರಿಗೆ ನೀಡಿ, ಪ್ರಜ್ಞೆ ತಪ್ಪಿಸಿ ಅವರ ಬಳಿ ಇದ್ದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

railway station theives arrested in  manglore
ರೈಲಿನಲ್ಲಿ ಅಮಲು ಪದಾರ್ಥ ನೀಡಿ ಕಳ್ಳತನ

By

Published : Jan 25, 2020, 1:01 AM IST

ಮಂಗಳೂರು:ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಗೆ ಚಹಾದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿ ಅವರನ್ನು ಪ್ರಜ್ಞಾಹೀನರನ್ನಾಗಿಸಿ ಹಣ ಒಡವೆ ದೋಚಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.


ಪುತ್ತೂರು ತಾಲೂಕಿನ ನೆಟ್ಟಣಿಗೆ ಮೂಡ್ನೂರು ಗ್ರಾಮದ ಕರ್ನೂರು ನಾಗನಡ್ಕ ನಿವಾಸಿ ಯಾಕೂಬ್ (37) ಹಾಗೂ ಕರ್ನೂರು ನಿವಾಸಿ ಪಾಲ್ತಾಡಿ ಮುಹಮ್ಮದ್ (35) ಬಂಧಿತರು. 2019ರ ಆಗಸ್ಟ್ 22ರಂದು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಟೀ ಮೂಲಕ ಪ್ರಯಾಣಿಕರೊಬ್ಬರಿಗೆ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿ ಬಿದ್ದಾಗ ಅವರ ಬಳಿ ಹಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಪೈಕಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

For All Latest Updates

ABOUT THE AUTHOR

...view details