ಮಂಗಳೂರು : ನಗರದ ಜೆಪ್ಪುವಿನಲ್ಲಿರುವ ಭಗಿನಿ ಸಮಾಜದಲ್ಲಿನ ಸುಮಾರು 30-40 ಅನಾಥ ಮಕ್ಕಳಿಗೆ ನಿತ್ಯ ಬಳಕೆಯ ವಸ್ತುಗಳನ್ನು ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ವಿತರಿಸಿದರು. ಮೈಸೂರು ಮೂಲದ ಸುಹೈಲ್ ಅಹ್ಮದ್, ಮನ್ಸೂರ್ ಅಹ್ಮದ್ ಹಾಗೂ ಮಂಗಳೂರಿನ ನಿಶಾದ್ ಅವರು ಈ ನಿತ್ಯಬಳಕೆಯ ವಸ್ತುಗಳ ಕಿಟ್ ಅನ್ನು ಒದಗಿಸಿದ್ದರು.
ಕಿಟ್ ವಿತರಿಸಿ ಮಾತನಾಡಿದ ಭಾಸ್ಕರ ರಾವ್, ಮಕ್ಕಳು ಯಾವುದೇ ಕಾರಣಕ್ಕೂ ಧೈರ್ಯಗೆಡಬಾರದು, ಎಂತಹ ಸಂದರ್ಭ ಬಂದರೂ ಶಿಕ್ಷಣ ಮೊಟಕುಗೊಳಿಸಬಾರದು. ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಮುಂದೆ ಬರಬೇಕು. ನೀವೆಲ್ಲ ಇಷ್ಟರವರೆಗೆ ಹಲವು ಕಷ್ಟಗಳನ್ನು ಎದುರಿಸಿ ಮುಂದೆ ಬಂದಿದ್ದರೆ, ಅದಕ್ಕೆ ನಿಮ್ಮಲ್ಲಿರುವ ಧೈರ್ಯ ಕಾರಣ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.