ಕರ್ನಾಟಕ

karnataka

ETV Bharat / state

ಮಣ್ಣು ಗಣಿಗಾರಿಕೆ ಮೇಲೆ ದಾಳಿ: 28 ಲಾರಿ, 5 ಜೆಸಿಬಿ, 3 ಹಿಟಾಚಿ ವಶಕ್ಕೆ

ಮುಡಿಪು ಆಸುಪಾಸಿನಲ್ಲಿ ವ್ಯಾಪಕವಾಗಿ ಮಣ್ಣಿನ ಗಣಿಗಾರಿಕೆ ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲೂ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿತ್ತು. ಇದೀಗ ಸಹಾಯಕ ಆಯುಕ್ತರು ದಾಳಿ ಮಾಡಿ, ಬಿಸಿ ಮುಟ್ಟಿಸಿದ್ದಾರೆ.

ಮಣ್ಣು ಗಣಿಗಾರಿಕೆ ಮೇಲೆ ದಾಳಿ
ಮಣ್ಣು ಗಣಿಗಾರಿಕೆ ಮೇಲೆ ದಾಳಿ

By

Published : Oct 1, 2020, 2:49 AM IST

ಉಳ್ಳಾಲ: ಮುಡಿಪು ಬಳಿ ಅಕ್ರಮವಾಗಿ ನಡೆಯುತ್ತಿದ್ದ ಮಣ್ಣಿನ ಗಣಿಗಾರಿಕೆ ಮೇಲೆ ದಾಳಿ ನಡೆಸಿರುವ ಸಹಾಯಕ ಆಯುಕ್ತರ ನೇತೃತ್ವದ ತಂಡವು 28 ಲಾರಿ, 5 ಜೆಸಿಬಿ, 3 ಹಿಟಾಚಿಯನ್ನು ವಶಕ್ಕೆ ಪಡೆದುಕೊಂಡಿದೆ. ಜೊತೆಗೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ಇಬ್ಬರ ಮೇಲೆ ಪ್ರಕರಣ ದಾಖಲಿಸಲು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಹಾಯಕ ಆಯುಕ್ತ ಮದನ್ ಮೋಹನ್. ಸಿ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಮುಡಿಪು ಸಮೀಪದ ಪಜೀರು ಗ್ರಾ.ಪಂ ಹಾಗೂ ಬಾಳೆಪುಣಿ ಗ್ರಾ.ಪಂಗೆ ಒಳಪಟ್ಟಿರುವ ಜಾಗದ ಮೇಲೆ ದಾಳಿ ನಡೆಯಿತು. ಹೊರ ರಾಜ್ಯಗಳಿಗೆ ಮಣ್ಣು ಸಾಗಾಟಕ್ಕೆ ಯತ್ನಿಸುತ್ತಿದ್ದ 28 ಲಾರಿಗಳು ಹಾಗೂ ಮಣ್ಣು ಅಗೆಯುತ್ತಿದ್ದ ಮೂರು ಹಿಟಾಚಿ ಹಾಗೂ ಐದು ಜೆಸಿಬಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಣ್ಣು ಗಣಿಗಾರಿಕೆ ಮೇಲೆ ದಾಳಿ

ಮುಡಿಪು ಆಸುಪಾಸಿನಲ್ಲಿ ವ್ಯಾಪಕವಾಗಿ ಮಣ್ಣಿನ ಗಣಿಗಾರಿಕೆ ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲೂ ಗಣಿಗಾರಿಕೆ ನಿರಂತರವಾಗಿ ನಡೆಯುತಿತ್ತು. ಆದ್ರೂ ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗ ಸಹಾಯಕ ಆಯುಕ್ತರು ದಾಳಿ ಮಾಡಿ, ಬಿಸಿ ಮುಟ್ಟಿಸಿದ್ದಾರೆ.

ಅನುಮತಿ ನೀಡಿರುವ ಸರ್ವೇ ನಂಬರ್ ಬದಲಿಸಿ ಇನ್ನೊಂದು ಜಾಗದಲ್ಲಿ ಗಣಿಗಾರಿಕೆ ಹಾಗೂ ಸರ್ಕಾರ ನೀಡಿರುವ ಲೀಸ್ ಕ್ಯಾನ್ಸಲ್ ಆಗಿದ್ದರೂ ಮತ್ತೆ ಅದೇ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಜಾಗ ಸೇರಿದ ಇಬ್ಬರ ವಿರುದ್ಧ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಸಹಾಯಕ ಆಯುಕ್ತ ಮದನ್ ಮೋಹನ್ ತಿಳಿಸಿದ್ದಾರೆ.

ಅಭಿಯಾನದ ಮೂಲಕ ಹೋರಾಟ:
ಕಳೆದ ಒಂದು ತಿಂಗಳಿನಿಂದ ಅಕ್ರಮ ಮಣ್ಣು ಗಣಿಗಾರಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ಅಭಿಯಾನ ಆರಂಭವಾಗಿತ್ತು.

ABOUT THE AUTHOR

...view details