ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಭಿನಂದನಾ ಸಭೆ: ಬಿಜೆಪಿ ಸೇರ್ಪಡೆಯಾದವರ ವಿರುದ್ಧ ರೈ ಪರೋಕ್ಷ ಟೀಕೆ

ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ಅವಕಾಶ ದೊರಕುವುದೇ ದೊಡ್ಡ ಋಣ. ಪಂಚಾಯಿತಿ ಸದಸ್ಯನಾದೊಡನೆ ಕಾಂಗ್ರೆಸ್ ಋಣ ಅವರಿಗೆ ಆರಂಭಗೊಳ್ಳುತ್ತದೆ. ಕಾಂಗ್ರೆಸ್ ಋಣದಿಂದ ಮುಕ್ತನಾಗಲು ಜನ್ಮಜನ್ಮಾಂತರಕ್ಕೂ ಅಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ರೈ ಪರೋಕ್ಷ ಟೀಕೆ
ರೈ ಪರೋಕ್ಷ ಟೀಕೆ

By

Published : Dec 26, 2020, 9:21 PM IST

ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಇತ್ತೀಚೆಗೆ ಕಾಂಗ್ರೆಸ್​ನಿಂದ ಬಿಜೆಪಿಗೆ ನಾಯಕರು ವಲಸೆ ಹೋಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವೂ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸಮಾವೇಶ ಆಯೋಜಿಸಿ, ಕೆಲ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡರು. ಈ ವೇಳೆ, ಬಿಜೆಪಿಗೆ ಸೇರಿದ ಕೈ ನಾಯಕರನ್ನು ರೈ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ಅವಕಾಶ ದೊರಕುವುದೇ ದೊಡ್ಡ ಋಣ. ಪಂಚಾಯಿತಿ ಸದಸ್ಯನಾದೊಡನೆ ಕಾಂಗ್ರೆಸ್ ಋಣ ಅವರಿಗೆ ಆರಂಭಗೊಳ್ಳುತ್ತದೆ. ಕಾಂಗ್ರೆಸ್ ಋಣದಿಂದ ಮುಕ್ತನಾಗಲು ಜನ್ಮಜನ್ಮಾಂತರಕ್ಕೂ ಅಸಾಧ್ಯ ಎಂದು ಹೆಳುತ್ತಾ ಕಾಂಗ್ರೆಸ್​ ಅನ್ನು ಧರ್ಮ ಎಂದು ಪಕ್ಷ ತ್ಯಜಿಸುವವರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ

ಗ್ರಾ.ಪಂ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿದವರಿಗೆ ಬೆದರಿಕೆ ಬಂದಿತ್ತು. ಅದಕ್ಕೆ ಜಗ್ಗದೇ ಸವಾಲುಗಳನ್ನು ಎದುರಿಸಿ ಕಣಕ್ಕಿಳಿದವರನ್ನು ಅಭಿನಂದಿಸುತ್ತೇನೆ ಎಂದರು.

ಪಶ್ಚಿಮವಾಹಿನಿ ಯೋಜನೆ ಆಗಬೇಕು ಎಂದು ಒತ್ತಾಯಿಸಿ ನಿಯೋಗ ಕೊಂಡೊಯ್ದದ್ದನ್ನು ನೆನಪಿಸಿದ ರೈ, ಪ್ರಚಾರಕ್ಕಾಗಿ ಯೋಜನೆ ವಿರೋಧಿಸಿ ಪಾದಯಾತ್ರೆ ನಡೆಸಿದವರು ಇಂದು ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿ ಕೋಲಾರಕ್ಕೆ ನೀರು ಹರಿಸುವುದು ತಮ್ಮ ಸಾಧನೆ ಎಂದು ಹೇಳಿರುವುದಾಗಿ ಆರೋಪಿಸಿದರು.

ABOUT THE AUTHOR

...view details