ಬಂಟ್ವಾಳ: ಕೊರೊನಾ ನಿಯಂತ್ರಣ ಕ್ರಮಗಳಿಗೆ ಸರ್ಕಾರ ಖರ್ಚು ಮಾಡಿರುವ ಹಣದ ಬಗ್ಗೆ ಲೆಕ್ಕ ಕೊಡಿ ಎಂದು ಸರ್ಕಾರವನ್ನು ಪ್ರಶ್ನಿಸಿರುವ ಮಾಜಿ ಸಚಿವ ಬಿ.ರಮಾನಾಥ ರೈ, ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆ ಇದೆ ಎಂದಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಖರ್ಚು ಮಾಡಿದ ಲೆಕ್ಕ ಕೊಡಿ: ರೈ - ಮಾಜಿ ಸಚಿವ ಬಿ.ರಮಾನಾಥ ರೈ
ಕೊರೊನಾ ನಿಯಂತ್ರಣ ಕಾರ್ಯದಲ್ಲಿ ರಾಜ್ಯ ಸರ್ಕಾರ ಯಾವ್ಯಾವ ವಿಚಾರಗಳಿಗೆ ಎಷ್ಟೆಷ್ಟು ಖರ್ಚು ಮಾಡಿದೆ ಎಂದು ಲೆಕ್ಕ ನೀಡುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
ಪಿಪಿಇ ಕಿಟ್, ಟೆಸ್ಟ್ ಕಿಟ್, ಸ್ಯಾನಿಟೈಸರ್ ಮುಂತಾದವುಗಳ ಮಾರುಕಟ್ಟೆ ದರ ಹಾಗೂ ಸರ್ಕಾರ ಖರೀದಿ ಮಾಡಿದ ದರಗಳೆಷ್ಟು ಎಂಬ ವಿವರವನ್ನು ಸರ್ಕಾರ ನೀಡಬೇಕು. ಆಹಾರ ಕಿಟ್ಗಳನ್ನು ಕೊಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ, ಅದನ್ನು ಯಾರಿಗೆ ನೀಡಲಾಗಿದೆ ಎಂದು ತಾಲೂಕುವಾರು ಹಾಗೂ ವಾರ್ಡಿನ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದ್ಧಾರೆ.
ವಲಸೆ ಕಾರ್ಮಿಕರ ಆಹಾರ ಹಾಗೂ ಪ್ರಯಾಣಕ್ಕಾಗಿ ಎಷ್ಟು ಖರ್ಚು ಮಾಡಲಾಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ಗಳಲ್ಲಿ ಯಾವ ವೃತ್ತಿ ಹಾಗೂ ಸಮುದಾಯದವರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ವಿವರವನ್ನೂ ಸಹ ನೀಡಬೇಕು ಎಂದು ರೈ ಹೇಳಿದ್ದಾರೆ.