ಕರ್ನಾಟಕ

karnataka

ETV Bharat / state

ತೊಕ್ಕೊಟ್ಟು ಮೇಲ್ಸೇತುವೆ ಮೇಲೆ ಕಾಣಿಸಿಕೊಂಡ ರಾಣಿ ಅಬ್ಬಕ್ಕ ಪೋಸ್ಟರ್​ - Ullala fly over

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಪ್ರಸ್ತಾಪದಿಂದ ರಾಜ್ಯದಲ್ಲಿ ವಿವಾದ ಭುಗಿಲೆದ್ದಿತ್ತು. ಇದೇ ಹಿನ್ನೆಲೆ ತೊಕ್ಕೊಟ್ಟುವಿನ ಮೇಲ್ಸೇತುವೆಗೆ ರಾಣಿ ಅಬ್ಬಕ್ಕ ಹೆಸರಿಡಲಾಗಿದೆ. ಸೇತುವೆ ಮೇಲೆ ಬಜರಂಗದಳ ಅಬ್ಬಕ್ಕರ ಪೋಸ್ಟರ್ ಹಾಕಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Queen Abbakka's name appearing on the Takkotu bridge
ತೊಕ್ಕೊಟ್ಟು ಮೇಲ್ಸೇತುವೆ ಮೇಲೆ ಕಾಣಿಸಿಕೊಂಡ ರಾಣಿ ಅಬ್ಬಕ್ಕ ಹೆಸರು

By

Published : Jun 3, 2020, 11:39 PM IST

ಉಳ್ಳಾಲ (ದಕ್ಷಿಣ ಕನ್ನಡ):ತೊಕ್ಕೊಟ್ಟು ಮೇಲ್ಸೇತುವೆಗೆ ವೀರ ರಾಣಿ ಅಬ್ಬಕ್ಕ ಹೆಸರಿಡಬೇಕೆಂದು ಒತ್ತಾಯಿಸಿ, ತಡೆಗೋಡೆ ಮೇಲೆ ' ರಾಣಿ ಅಬ್ಬಕ್ಕ ಮೇಲ್ಸೇತುವೆ' ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಮಾಡಲಾಗಿದೆ. ಈ ಹೆಸರು ಬರೆದಿರುವುದನ್ನ ಬಜರಂಗದಳ ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ಒಪ್ಪಿಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಜನರಂಗದಳ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ.

ಮುಂದಿನ ಪೀಳಿಗೆಯು ಸ್ವಾತಂತ್ರ ಹೋರಾಟಗಾರರ ಸ್ಮರಣೆಗೆ ಇನ್ಮುಂದೆ ನಗರದ ಪ್ರಮುಖ ರಸ್ತೆಗಳಿಗೆ ಸ್ವತಂತ್ರ ಹೋರಾಟಗಾರರ ಹೆಸರನ್ನು ಇಟ್ಟು ಮುಂದಿನ ಜನಾಂಗಕ್ಕೆ ಮಾದರಿಯಾಗುವ ಕೆಲಸವನ್ನು ಬಜರಂಗದಳ ಮಾಡಲಿದೆ ಎಂದು ತಿಳಿಸಿದೆ.

ನಿನ್ನೆಯಷ್ಟೇ ಪಂಪ್ ವೆಲ್ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್​ ಎಂಬ ಪೋಸ್ಟರ್ ಹಾಕಲಾಗಿತ್ತು. ಇಂದು ತೊಕ್ಕೊಟ್ಟು ಮತ್ತು ನೆಹರು ಮೈದಾನಕ್ಕೆ ಕೋಟಿ ಚೆನ್ನಯ್ಯ ಹೆಸರು ಇಡುವಂತೆ ಬ್ಯಾನರ್ ಅಳವಡಿಸಿದೆ.

ABOUT THE AUTHOR

...view details