ಮಂಗಳೂರು :ದುಬೈಯಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಜೂನ್ 27ರಂದು ಬಂದಿಳಿದ 150 ಪ್ರಯಾಣಿಕರು ಕಾಸರಗೋಡಿನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅಲ್ಲಿ ಗೊಂದಲ ಏರ್ಪಟ್ಟು ಇದೀಗ ಅವರೆಲ್ಲರೂ ಮಂಗಳೂರಿಗೆ ಶಿಫ್ಟ್ ಆಗಿ ವಿವಿಧ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಗಾದ ಘಟನೆ ನಡೆದಿದೆ.
ಕೆಸಿಎಫ್ ಆಯೋಜಿಸಿರುವ ಚಾರ್ಟರ್ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಬಂದಿರುವ 150 ಪ್ರಯಾಣಿಕರನ್ನು ಮಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಲು ಪ್ರಯತ್ನಿಸಿತ್ತು. ಆದರೆ, ದ.ಕ ಜಿಲ್ಲಾಡಳಿತ, ಕರ್ನಾಟಕ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದ ಅನುಮತಿ ಸಿಗದ ಕಾರಣ ಜೂನ್ 27ರಂದು ದುಬೈಯಿಂದ ಕೇರಳದ ಕಣ್ಣೂರಿಗೆ ವಿಮಾನ ಬಂದಿದೆ.
ಈ ವಿಮಾನದಲ್ಲಿ ಕರ್ನಾಟಕದ 150 ಪ್ರಯಾಣಿಕರಿದ್ದಾರೆ. ಕರ್ನಾಟಕದಲ್ಲಿ 7 ದಿನ ಹೋಟೆಲ್ ಕ್ವಾರಂಟೈನ್ ಇರುವ ಈ ಎಲ್ಲಾ ಪ್ರಯಾಣಿಕರಿಗೆ ಕರ್ನಾಟಕ ಪ್ರವೇಶಕ್ಕೆ ಕಾನೂನು ತೊಡಕು ಉಂಟಾಗಿತ್ತು. ಪ್ರಯಾಣಿಕರಿಗೆ ಕ್ವಾರಂಟೈನ್ ಕುರಿತು ಹಾಗೂ ಇ-ಪಾಸ್ ಬಗ್ಗೆ ಸರಿಯಾದ ಮಾಹಿತಿಯೂ ನೀಡಿರಲಿಲ್ಲ. ಮೊನ್ನೆ ಕಣ್ಣೂರಿಂದ ಬಂದ ಪ್ರಯಾಣಿಕರಿಗೆ ಕಾಸರಗೋಡಿನ 3 ಹೋಟೆಲ್‌ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು.