ಕರ್ನಾಟಕ

karnataka

ETV Bharat / state

ಪುತ್ತೂರು: ವಿಶ್ವಕರ್ಮ ಜಯಂತಿ ದಿನಾಚರಣೆ - Vishwakarma Jayanthi Day celebration news

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ದಿನಾಚರಣೆ ಮಾಡಲಾಯಿತು.

ವಿಶ್ವಕರ್ಮ ಜಯಂತಿ ದಿನಾಚರಣೆ
ವಿಶ್ವಕರ್ಮ ಜಯಂತಿ ದಿನಾಚರಣೆ

By

Published : Sep 17, 2020, 4:21 PM IST

Updated : Sep 17, 2020, 4:29 PM IST

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಂಘ ಸಂಸ್ಥೆಯ ಆಶ್ರಯದಲ್ಲಿ ಇಂದು ವಿಶ್ವಕರ್ಮ ಜಯಂತಿ ದಿನಾಚರಣೆಯನ್ನು ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು, ಮಹಾತ್ಮ ಗಾಂಧೀಜಿ, ವಿಶ್ವಕರ್ಮರಂತ ಮಹಾತ್ಮರು ವ್ಯಕ್ತಿಗಳಲ್ಲ. ಅವರು ಸಮಾಜದ ಶಕ್ತಿ. ಸಮಾಜದ ಅಭಿವೃದ್ಧಿಗಾಗಿ ಬದುಕಿದವರು. ತಮ್ಮ ಸರ್ವಸ್ವವನ್ನು ಸಮಾಜದ ಏಳಿಗೆಗಾಗಿ ಧಾರೆ ಎರೆದವರು. ಅವರ ಆದರ್ಶ, ಜೀವನ ಶೈಲಿಯನ್ನು ಇಂದಿನ ಹಾಗೂ ಮುಂದಿನ ಸಮಾಜಕ್ಕೆ ತಿಳಿಸಿ, ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಹಾತ್ಮ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು.

ವಿಶ್ವಕರ್ಮ ಜಯಂತಿ ದಿನಾಚರಣೆ

ವಿಶ್ವಕರ್ಮ ದೇವರು ವಿಶ್ವವನ್ನೇ ಸೃಷ್ಟಿ ಮಾಡಿದವರು. ಅವರ ಜನ್ಮ ದಿನಾಚರಣೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಇಡೀ ಸಮಾಜವೇ ಆಚರಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ. ವಾಸ್ತು ಶಿಲ್ಪವನ್ನು ಬಲ್ಲವರು. ಮನೆ, ದೇವಾಲಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೈಚಳಕವಿದೆ. ಪ್ರತಿಯೊಂದು ಕಲೆಯಲ್ಲೂ ವಿಶ್ವಕರ್ಮ ಸಮಾಜದ ಚಾರಿತ್ರ್ಯವಿದೆ ಎಂದರು.

Last Updated : Sep 17, 2020, 4:29 PM IST

ABOUT THE AUTHOR

...view details