ಪುತ್ತೂರು: ಆರ್ಕಿಟೆಕ್ಚರ್ ಇಂಜಿನಿಯರಿಂಗ್‌ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ನವೆಂಬರ್ 27 ರಂದು ಬಿಡುಗಡೆ ಮಾಡಿದ ರಾಷ್ಟ್ರ ಮಟ್ಟದ ಫಲಿತಾಂಶದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಮೊನಾ ಎಸ್.ಟಿ 174 ನೇ ರ‍್ಯಾಂಕ್ ಗಳಿಸಿದ್ದಾರೆ.
ಆರ್ಕಿಟೆಕ್ಚರ್‌ನಲ್ಲಿ 174 ನೇ ರ‍್ಯಾಂಕ್ ಪಡೆದ ಪುತ್ತೂರಿನ ವಿದ್ಯಾರ್ಥಿನಿ - puttur student 174th rank in architecture
ನವೆಂಬರ್ 27 ರಂದು ಬಿಡುಗಡೆ ಮಾಡಿದ ರಾಷ್ಟ್ರ ಮಟ್ಟದ ಫಲಿತಾಂಶದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಮೊನಾ ಎಸ್.ಟಿ ಆರ್ಕಿಟೆಕ್ಚರ್‌ನಲ್ಲಿ 174 ನೇ ರ‍್ಯಾಂಕ್ ಗಳಿಸಿದ್ದಾರೆ.
ಮೊನಾ ಎಸ್.ಟಿ
ಇತ್ತೀಚೆಗೆ ನಡೆದ ಜೆಇಇ ಪೇಪರ್ 2 ಫಲಿತಾಂಶವನ್ನು ಪರಿಗಣಿಸಿ ಈ ರ‍್ಯಾಂಕ್ ನೀಡಲಾಗಿದೆ. ಇವಳು ಹಾಸನದ ಅರಕಲಗೂಡಿನ ತಿಮ್ಮೆಗೌಡ ಮತ್ತು ಸುಮಿತ್ರಾ ದಂಪತಿಗಳ ಸುಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.