ಕರ್ನಾಟಕ

karnataka

ETV Bharat / state

ಪುತ್ತೂರು: ಸಾಫ್ಟ್‌ವೇರ್ ದಂಪತಿಯ ಸ್ವದೇಶಿ ಚಾಕೋಲೆಟ್​​ಗೆ ಭಾರೀ ಬೇಡಿಕೆ - ಪುತ್ತೂರು ಸಾಫ್ಟ್​ವೇರ್​ ದಂಪತಿಯ ಆವಿಷ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ಜನರು ಸ್ವದೇಶಿ ವಸ್ತುಗಳ ಉತ್ಪಾದನೆಗೆ ಮುಂದಾಗಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಪುತ್ತೂರಿನ ಈ ಸಾಫ್ಟ್​​ವೇರ್​ ದಂಪತಿ.

Puttur software couple made  Homemade Chocolate
ಸಾಫ್ಟ್‌ವೇರ್ ದಂಪತಿಯ ಸ್ವದೇಶಿ ಚಾಕೋಲೆಟ್

By

Published : Dec 4, 2020, 6:16 PM IST

Updated : Dec 4, 2020, 9:06 PM IST

ಪುತ್ತೂರು:ಕೊರೊನಾ ಮಹಾಮಾರಿಯಿಂದಾಗಿ ಜನರ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಇತರರನ್ನು ಅವಲಂಬಿಸದೇ ತಮ್ಮಲ್ಲಿರುವ ವಸ್ತುಗಳಿಂದಲೇ ತಮಗೆ ಬೇಕಾದದ್ದನ್ನು ತಯಾರಿಸಿ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ಜನರು ಸ್ವದೇಶಿ ವಸ್ತುಗಳ ಉತ್ಪಾದನೆಗೆ ಮುಂದಾಗಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಪುತ್ತೂರಿನ ಈ ಸಾಫ್ಟ್​ವೇರ್​ ದಂಪತಿ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಚ್ಚಿಮಲೆ ನಿವಾಸಿಗಳಾದ ಕೇಶವಮೂರ್ತಿ - ಪೂರ್ಣಶ್ರೀ ದಂಪತಿ ಬೆಂಗಳೂರಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಲಾಕ್​ಡೌನ್​ ಸಮಯದಲ್ಲಿ ರಾಜಧಾನಿಯಿಂದ ತಮ್ಮ ಸ್ವ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಮನೆಯಿಂದಲೇ ಕೆಲಸ ಮಾಡುತ್ತಾ ತಮ್ಮ ಬಿಡುವಿನ ಸಮಯವನ್ನು ತೋಟದಲ್ಲಿ ಕಳೆಯುತ್ತಿದ್ದರು. ಇವರ ಬಳಿ ಹದಿನೆಂಟು ಎಕರೆ ಕೃಷಿ ಭೂಮಿ ಇದ್ದು, ಸುಮಾರು 500 ರಷ್ಟು ಕೊಕ್ಕೋ ಗಿಡಗಳನ್ನು ಹೊಂದಿದ್ದಾರೆ. ಆದರೆ ಇದರಲ್ಲಿ ಬಹಳಷ್ಟು ಬೀಜಗಳು ನಿರುಪಯುಕ್ತವಾಗುತ್ತಿದ್ದವು. ಇದನ್ನು ಗಮನಿಸಿದ ದಂಪತಿ ಕೊಕ್ಕೋ ಹಣ್ಣಿನ ಬೀಜಗಳಿಂದ ಚಾಕೋಲೆಟ್​​ ತಯಾರಿಸುವ ಹೊಸ ಯೋಚನೆಗೆ ಮುಂದಾಗಿದ್ದರು.

ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾನೂನು ಕೂಡಲೇ ಜಾರಿಯಾಗಲಿ: ಪೇಜಾವರ ಶ್ರೀ

ತಮ್ಮ ತೋಟದಲ್ಲಿ ಬೆಳೆದ ಕೊಕ್ಕೋ ಬೆಳೆಯಿಂದ ಚಾಕೋಲೆಟ್​​ ತಯಾರಿಸಲು ದಂಪತಿ ನಿರ್ಧರಿಸಿ ಕಾರ್ಯಪ್ರವೃತ್ತರಾದರು. ಯಾವುದೇ ರಾಸಾಯನಿಕ ವಸ್ತುಗಳನ್ನು ಬೆರೆಸದೆ ಸಾವಯವ ಮಾದರಿಯಲ್ಲೇ ಕೊಕ್ಕೋ ಚಾಕೋಲೆಟ್​ಗಳನ್ನು ತಯಾರಿಸಲಾಗುತ್ತಿದ್ದು, ಅವುಗಳನ್ನು ಆನ್​ಲೈನ್​ ಮೂಲಕ ಮಾರಾಟ ಮಾಡಲು ಆರಂಭಿಸಿದರು. ಇದರಿಂದ ವ್ಯಾಪಾರದ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಯಿತು. ಇದೀಗ ಇವರು ತಯಾರಿಸುತ್ತಿರುವ ಚಾಕೋಲೆಟ್​​ಗೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿದೇಶಗಳಿಂದಲೂ ಬೇಡಿಕೆ ಬರುತ್ತಿದೆ.

ಸ್ವದೇಶಿ ಚಾಕೋಲೆಟ್​​ ತಯಾರಿಸಿದ ಸಾಫ್ಟ್‌ವೇರ್ ದಂಪತಿ

ಪ್ರಧಾನಿಗಳು ದೇಶದ ಸಂಪನ್ಮೂಲಗಳನ್ನೇ ಬಳಸಿಕೊಂಡು ಯುವ ಜನತೆ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿಯಾಗಬೇಕೆಂದು ಕರೆ ನೀಡಿದ್ದರು. ಪ್ರಧಾನಿಯವರ ಈ ಕರೆಗೆ ಪುತ್ತೂರಿನ ಈ ಸಾಫ್ಟ್​​​ವೇರ್ ದಂಪತಿ ಸ್ಪಂದಿಸಿದ್ದು, ತಮ್ಮ ಬಿಡುವಿನ ಸಮಯದಲ್ಲಿ ತಯಾರಿಸಿದ ಚಾಕೋಲೆಟ್​ಗಳನ್ನು​ ಮೂಲಕ ದೇಶ - ವಿದೇಶಗಳಿಗೂ ಮುಟ್ಟುವಂತೆ ಮಾಡಿದ ಈ ದಂಪತಿ ಸಾಧನೆಗೆ ಹ್ಯಾಟ್ಸ್ ಅಪ್​​ ಹೇಳಲೇಬೇಕು.

Last Updated : Dec 4, 2020, 9:06 PM IST

ABOUT THE AUTHOR

...view details