ಕರ್ನಾಟಕ

karnataka

By

Published : May 4, 2021, 1:28 PM IST

Updated : May 4, 2021, 2:26 PM IST

ETV Bharat / state

ಪ್ರೇಯಸಿ ಕೈ ಕೊಟ್ಟಳೆಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ... ಶಾಸಕರ ವಾರ್​ ರೂಂನಿಂದ ಮರುಜೀವ

ಪ್ರೇಯಸಿ ಕೈಕೊಟ್ಟಳೆಂದು ಆತ್ಮಹತ್ಯೆಗೆ ಮುಂದಾಗಿದ್ದ ಮೈಸೂರು ಮೂಲದ ವ್ಯಕ್ತಿಗೆ ಪುತ್ತೂರಿನ ಶಾಸಕರ ವಾರ್ ​ರೂಂ ಮರುಜೀವ ನೀಡಿದೆ.

Puttur
ಆತ್ಮಹತ್ಯೆಗೆ ಬಂದಿದ್ದ ಯುವಕ

ಪುತ್ತೂರು: ಗುಜರಾತಿನಲ್ಲಿ ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಊರೂರು ಅಲೆದು ಕೊನೆಗೆ ಪುತ್ತೂರಿಗೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವನಿಗೆ ಪುತ್ತೂರು ಶಾಸಕರ ವಾರ್‌ ರೂಂ ಮೂಲಕ ಕೌನ್ಸೆಲಿಂಗ್ ನಡೆಸಿ ಮರು ಜೀವನದ ಮಾರ್ಗ ತೋರಿಸಿದ ಘಟನೆ ಮೇ 3ರಂದು ನಡೆದಿದೆ.

ಮೈಸೂರು ಮೂಲದವನಾದ ನಂದೀಶ್​ ಎಂಬಾತ ಕಳೆದ ಹಲವಾರು ವರ್ಷಗಳಿಂದ ಗುಜರಾತ್‌ನ ಹೋಟೆಲ್​ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ನಂದೀಶ್​ ಕಬಕ ಸಮೀಪದ ಪೋಳ್ಯ ತಿರುವಿನಲ್ಲಿ ರಸ್ತೆ ಬದಿ ಬಿದ್ದಿರುವುದನ್ನು ನಾಗರಾಜ್ ಮಿತ್ತೂರು ಎಂಬುವರು ಗಮನಿಸಿ ಪುತ್ತೂರು ಬಿಜೆಪಿ ಕಚೇರಿಯ ಬಳಿ ಕರೆ ತಂದಿದ್ದರು. ಅಲ್ಲಿ ಶಾಸಕರ ವಾರ್‌ ರೂಂ ಮೂಲಕ ನಂದೀಶ್​ಗೆ ಮೊದಲು ತಿಂಡಿ-ನೀರು ಕೊಟ್ಟು ಬಳಿಕ ವಿಚಾರಿಸಿದಾಗ ಸರಿಯಾಗಿ ಉತ್ತರಿಸದೇ ಇರುವುದನ್ನು ಗಮನಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯಲ್ಲಿ ಆಶ್ರಯ ನೀಡಲಾಯಿತು.

ಈ ವೇಳೆ ನಂದೀಶ್ ಮಾತನಾಡಿ, “ನಾನು ಮೈಸೂರು ಮೂಲದವನು. ನನ್ನ ತಂದೆ-ತಾಯಿ, ಅಕ್ಕಂದಿರು ಮೈಸೂರಿನಲ್ಲಿದ್ದಾರೆ. ನಾನು ಗುಜರಾತಿನಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಓರ್ವ ಯುವತಿಯೊಂದಿಗೆ ಲವ್ ಆಗಿತ್ತು. ಆಕೆ ಕೊನೆಗೆ ನನ್ನ ಕೈ ಬಿಟ್ಟಿದ್ದಾಳೆ. ಇದರಿಂದ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ ಅಲ್ಲಿಂದ ಕರ್ನಾಟಕಕ್ಕೆ ಬಂದಿದ್ದೇನೆ“ ಎಂದು ಹೇಳಿದ್ದಾನೆ.

ಆತ್ಮಹತ್ಯೆಗೆ ಬಂದಿದ್ದ ಯುವಕನ ರಕ್ಷಣೆ

ಈ ವೇಳೆ ಶಾಸಕರ ವಾರ್ ರೂಂನ ಸದಸ್ಯರು ಮತ್ತು ವಿಶ್ವ ಹಿಂದೂ ಪರಿಷತ್​, ಬಜರಂಗದಳದ ಸದಸ್ಯರು ನಂದೀಶ್​​ಗೆ ಕೌನ್ಸೆಲಿಂಗ್ ಮಾಡಿದ್ದಾರೆ. ನಂತರ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ನಂದೀಶ್ ನಾನು ಪುನಃ ಗುಜರಾತಿಗೆ ಹೋಗಬೇಕು ಎಂದು ಅವಲತ್ತುಕೊಂಡಿದ್ದಾನೆ. ಹೀಗಾಗಿ ಶಾಸಕರ ವಾರ್ ರೂಂ ಮೂಲಕ ಆತನನ್ನು ಗುಜರಾತಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಕುರಿತು ತೀರ್ಮಾನಿಸಲಾಯಿತು.

Last Updated : May 4, 2021, 2:26 PM IST

ABOUT THE AUTHOR

...view details