ಪುತ್ತೂರು/ ದಕ್ಷಿಣ ಕನ್ನಡ:ಲಾಕ್ಡೌನ್ ಹಿನ್ನೆಲೆ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿವೆ. ಇದರಿಂದ ಹಸಿವಿನಿಂದ ಕಂಗಾಲಾಗಿರುವ ಭಿಕ್ಷುಕರಿಗೆ ಮೆಸ್ಕಾಂ ಅಧಿಕಾರಿಗಳು ಊಟ ಬಾಳೆ ಹಣ್ಣು ನೀಡಿ ಮಾನವೀಯತೆ ಮೆರೆದಿದ್ದಾರೆ.
ಭಿಕ್ಷುಕರಿಗೆ ಊಟ ನೀಡಿ ಮಾನವೀಯತೆ ಮೆರೆದ ಪುತ್ತೂರು ಮೆಸ್ಕಾಂ ಸಿಬ್ಬಂದಿ
ಹಸಿವಿನಿಂದ ಕಂಗಾಲಾಗಿರುವ ಭಿಕ್ಷುಕರಿಗೆ ಪುತ್ತೂರಿನ ಮೆಸ್ಕಾಂ ಅಧಿಕಾರಿಗಳು ಊಟ ಬಾಳೆ ಹಣ್ಣು ನೀಡಿ ಮಾನವೀಯತೆ ಮೆರೆದಿದ್ದಾರೆ.
ಭಿಕ್ಷುಕರಿಗೆ ಊಟ ನೀಡಿ ಮಾನವೀಯತೆ ಮೆರೆದ ಪುತ್ತೂರು ಮೆಸ್ಕಾಂ ಸಿಬ್ಬಂದಿ
ಹೋಟೆಲ್, ಅಂಗಡಿಗಳ ಬಂದ್ ಆದ ಕಾರಣ ಕುಡಿಯಲು ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಲಿನ ಬೂತ್, ಮೆಡಿಕಲ್ ಬಿಟ್ಟರೆ ಬೇರೆ ಅಂಗಡಿಗಳು ತೆರೆಯುವುದಿಲ್ಲ. ಪರಿಸ್ಥಿತಿ ಅರಿತ ಪುತ್ತೂರು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಾದ ಅಶ್ರಫ್ ಕೂರ್ನಡ್ಕ, ಗಂದಪ್ಪ ಹಾಗೂ ಹರಿಶ್ಚಂದ್ರ ಅವರು ಭಿಕ್ಷುಕರಿಗೆ ಬೆಳಗಿನ ಚಹಾ, ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆ ಟೀ ನೀಡುತ್ತಿದ್ದಾರೆ. ಅಲ್ಲದೇ ಬಾಳೆಹಣ್ಣು, ಬೇಕರಿ ತಿಂಡಿಗಳನ್ನು ಸಹ ನೀಡುತ್ತಿದ್ದಾರೆ.
ಕಳೆದ 8 ದಿನಗಳಿಂದ ಇವರು ಮಾಡುತ್ತಿರುವ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.