ಕರ್ನಾಟಕ

karnataka

ಲಾರಿ ಬ್ಯಾಟರಿ ಕಳವು ಪ್ರಕರಣ: ಆರೋಪಿಗಳು ಕ್ವಾರಂಟೈನ್‌ನಿಂದ ನ್ಯಾಯಾಂಗ ಬಂಧನಕ್ಕೆ

By

Published : Jun 15, 2020, 4:43 PM IST

ಲಾರಿಯೊಂದರ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಪಟ್ಟ ಇಬ್ಬರು ಆರೋಪಿಗಳ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕ್ವಾರಂಟೈನ್ ನಿಂದ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Arrest
Arrest

ಪುತ್ತೂರು: ಕಬಕ ಅಡ್ಯಲಾಯ ದೇವಸ್ಥಾನದ ಬಳಿಯ ಬಾಡಿಗೆ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದರ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಪಟ್ಟ ಇಬ್ಬರು ಆರೋಪಿಗಳ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕ್ವಾರಂಟೈನ್ ನಿಂದ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಕಬಕ ಓಜಾಲ ನಿವಾಸಿ ಮಹಮ್ಮದ್ ತೌಫಿಕ್ (೨೩) ಮತ್ತು ಮೂಲತಃ ನರಿಮೊಗರು ಪುರುಷರಕಟ್ಟೆ ನಿವಾಸಿಯಾಗಿದ್ದು ಪ್ರಸ್ತುತ ಮಂಗಳೂರು ಕೆಂಜಾರುವಿನಲ್ಲಿ ವಾಸ್ತವ್ಯ ಇರುವ ಮಹಮ್ಮದ್ ಇಮ್ರಾನ್(೨೪) ಬಂಧಿತ ಆರೋಪಿಗಳು. ಜೂ. 10 ರಂದು ಮಧ್ಯಾಹ್ನ ಆರೋಪಿಗಳು ಲಾರಿಯ ಬ್ಯಾಟರಿ ಮತ್ತು ಜಾಕ್ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಪುತ್ತೂರು ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಬಂಧಿತ ಆರೋಪಿಗಳಿಬ್ಬರನ್ನು ನ್ಯಾಯಾಲಯ ಕೊರೊನಾ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಿ ವರದಿ ಬರುವ ತನಕ ಅವರನ್ನು ಕ್ವಾರಂಟೈನ್ ನಲ್ಲಿಡಲು ಸೂಚಿಸಿತ್ತು. ಇದೀಗ ಆರೋಪಿಗಳ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ABOUT THE AUTHOR

...view details