ಪುತ್ತೂರು: ಬಡಗನ್ನೂರು ಗ್ರಾಮದ ಶರವು ಎಂಬಲ್ಲಿನ ಗುಡ್ಡದ ಮೇಲೆ ಕೋಳಿ ಅಂಕ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಈಶ್ವರಮಂಗಲ ಹೊರಠಾಣಾ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂವರ ಬಂಧನ: ಹಲವು ವಸ್ತುಗಳು ಜಪ್ತಿ - Puttur crime news
ಪುತ್ತೂರು ತಾಲೂಕಿನ ಈಶ್ವರ ಮಂಗಲ ಹೊರಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿದ್ದಾರೆ.
Puttur
ಹರೀಶ್ ಕುಮಾರ, ದಯಾನಂದ, ಚನಿಯಪ್ಪ ಬಂಧಿತ ಆರೋಪಿಗಳು. ಸಂಪ್ಯ ಪೊಲೀಸ್ ಠಾಣೆಯ ಎಸ್ಐ ಅವರ ಸೂಚನೆಯಂತೆ ಈಶ್ವರಮಂಗಲ ಹೊರಠಾಣೆಯ ಎ.ಎಸ್.ಐ ತಿಮ್ಮಯ್ಯ ಗೌಡ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಇನ್ನು ಬಂಧಿತರಿಂದ 1400 ರೂ. ನಗದು, ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ 5 ಕೋಳಿಗಳು, 2 ಬೈಕ್ ಮತ್ತು 1 ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.