ಪುತ್ತೂರು:ತಾಲೂಕಿನ ಕುರಿಯ ಎಂಬಲ್ಲಿ ನಿನ್ನೆ ನಡೆದ ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತೂರು ಡಬ್ಬಲ್ ಮರ್ಡರ್ ಪ್ರಕರಣ: 24 ಗಂಟೆಯೊಳಗೆ ಆರೋಪಿ ಅಂದರ್ ! - ಲೆಟೆಸ್ಟ್ ಪುತ್ತೂರು ಮಂಗಳೂರು ಮರ್ಡರ್ ನ್ಯೂಸ್
ಕುರಿಯ ಎಂಬಲ್ಲಿ ನಿನ್ನೆ ನಡೆದ ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ (29) ಬಂಧಿತ ಆರೋಪಿ. ಕಳ್ಳತನಕ್ಕಾಗಿ ಶೇಕ್ ಕೊಗ್ಗು ಸಾಹೇಬ್ ಅವರ ಮನೆಗೆ ನುಗ್ಗಿದ ಈತ ಕಳ್ಳತನದ ವೇಳೆ ಮನೆಯವರು ಎಚ್ಚರಗೊಂಡಾಗ ಮನೆಯಲ್ಲಿದ್ದ ಕತ್ತಿಯಿಂದಲೇ ಕಡಿದು ಹತ್ಯೆ ಮಾಡಿದ್ದಾನೆ. ಈತ ಮನೆಯಲ್ಲಿದ್ದ ಶೇಕ್ ಕೊಗ್ಗು ಸಾಹೇಬ್ (70), ಶಾಮಿಯಾ ಭಾನು (16) ಮತ್ತು ಖತೀಜಾಬಿ (65) ಎಂಬವರ ಮೇಲೆ ಹಲ್ಲೆ ಮಾಡಿದ್ದು, ಇದರಲ್ಲಿ ಶೇಕ್ ಕೊಗ್ಗು ಸಾಹೇಬ್ ಮತ್ತು ಶಾಮಿಯಾ ಭಾನು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಖತೀಜಾಬಿ ಅವರಿಗೆ ಗಂಭೀರ ಗಾಯವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯು ಮೃತ ಶೇಕ್ ಕೊಗ್ಗು ಸಾಹೇಬ್ ಜೊತೆಗೆ ಹಣಕಾಸಿನ ಮನಸ್ತಾಪ ಹೊಂದಿದ್ದು ಮನೆಯವರಿಗೆ ಪರಿಚಯಸ್ತನಾಗಿದ್ದನು. ತಾನು ಸಿಕ್ಕಿಹಾಕಿಕೊಳ್ಳುತ್ತೇನೆಂಬ ಭಯದಿಂದ ಆತ ಈ ಕೃತ್ಯ ಎಸಗಿದ್ದಾನೆ. ಹತ್ಯೆ ಬಳಿಕ ಮನೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6 ಸಾವಿರ ನಗದು ಕಳವುಗೈದಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನೂ ಘಟನೆ ವೇಳೆ ಆರೋಪಿ ಕೈಗೆ ಗಾಯವಾಗಿದ್ದು ಆತನಿಗೂ ಚಿಕಿತ್ಸೆ ನೀಡಲಾಗಿದೆ.