ಬಂಟ್ವಾಳ (ದ.ಕ): ನಗರಾದ್ಯಂತ ನಿಗದಿತ ವೇಳೆಯಲ್ಲಿ ಅಂದರೆ ಬೆಳಿಗ್ಗೆ 7ರಿಂದ 12 ಗಂಟೆವರೆಗೆ ದ್ವಿಚಕ್ರ ವಾಹನದಲ್ಲಿ ತೆರಳಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.
ನಿಗದಿತ ಸಮಯಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ: ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ
ಅಗತ್ಯ ವಸ್ತುಗಳ ಖರೀದಿಗೆ ನಿಗದಿತ ವೇಳೆಯಲ್ಲಿ ಹೊರಗಡೆ ತೆರಳಬೇಕು. ಈ ನಿಯಮ ಉಲ್ಲಂಘಿಸಿದ ಚಾಲಕರ ವಾಹನಗಳನ್ನು ಇಂದು ವಶಕ್ಕೆ ಪಡೆಯಲಾಯಿತು.
ನಿಗದಿತ ವೇಳೆಯಲ್ಲಿ ಖರೀದಿಗೆ ಅವಕಾಶ
ಆಟೋ ಹಾಗೂ ಇತರೆ ಬಾಡಿಗೆ ವಾಹನಗಳಲ್ಲಿ ಸಾಮಗ್ರಿ ಖರೀದಿಗೆ ತೆರಳುವವರು ಜೊತೆಗೆ ಬೇರೆ ಜನರನ್ನು ಕರೆದುಕೊಂಡು ಹೋಗುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ.
ಇಷ್ಟಾದರೂ ನಗರದ ಬಿ.ಸಿ. ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದರು.