ಪುತ್ತೂರು(ದಕ್ಷಿಣ ಕನ್ನಡ): ನಟ ಪುನೀತ್ ರಾಜ್‌ಕುಮಾರ್ ಸಾವಿನಲ್ಲೂ ಮಾನವೀಯತೆ ಮೆರೆದು ತಮ್ಮ ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಿದ್ದಾರೆ. ಇದರಿಂದ ಪ್ರೇರೇಪಣೆ ಪಡೆದ ಪುತ್ತೂರಿನ ನಿವಾಸಿ ಪ್ರವೀಣ್ ಡಿಸೋಜಾ ಅವರು ಕಣ್ಣುಗಳ ಜೊತೆ ತಮ್ಮ ಅಂಗಾಂಗ ದಾನಕ್ಕೂ ಮುಂದಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಭಿಮಾನಿ ಪ್ರವೀಣ್ ಡಿಸೋಜಾ ಮಾತನಾಡಿದ್ದಾರೆ ಈ ಸಂಬಂಧ ಈಗಾಗಲೇ ಮಂಗಳೂರಿನ ಪ್ರಸಾದ್ ನೇತ್ರಾಲಯದಲ್ಲಿ ಸಂಬಂಧಿತ ದಾಖಲೆ ಪತ್ರಗಳನ್ನು ತಯಾರಿಸಿಕೊಂಡಿದ್ದಾರೆ. ತನ್ನ ಎರಡು ಕಣ್ಣುಗಳು ದೃಷ್ಟಿಹೀನ ಸಮಸ್ಯೆಯನ್ನು ಎದುರಿಸುತ್ತಿರುವ ನಾಲ್ಕು ಮಂದಿಗೆ ಸಹಾಯವಾಗುತ್ತವೆ ಎನ್ನುವ ಮಾಹಿತಿ ಪಡೆದುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ.
ಪ್ರವೀಣ್ ಡಿಸೋಜಾ ಮತ್ತು ಕುಟುಂಬಸ್ಥರು ಪುನೀತ್ ರಾಜ್‌ಕುಮಾರ್ ಅವರಂತಹ ದೊಡ್ಡ ವ್ಯಕ್ತಿಗಳು ತಮ್ಮ ನೇತ್ರದಾನ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯಾದ ನಾನೇಕೆ ದಾನ ಮಾಡಬಾರದು ಎನ್ನುವುದನ್ನು ಯೋಚಿಸಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಪ್ರವೀಣ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ.
ನೇತ್ರದಾನ ಹಾಗೂ ಅಂಗಾಂಗ ದಾನಕ್ಕೆ ಸಂಬಂಧಿಸಿದ ದಾಖಲೆಗಳು ತನ್ನ ಈ ನಿರ್ಧಾರಕ್ಕೆ ಕುಟುಂಬದ ಎಲ್ಲರ ಸಹಮತವೂ ಇದೆ. ಕಣ್ಣಿನ ಜೊತೆಗೆ ಅಂಗಾಂಗ ದಾನಕ್ಕೂ ನಿರ್ಧರಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ನೇತ್ರದಾನ ಹಾಗೂ ಅಂಗಾಂಗ ದಾನಕ್ಕೆ ಸಂಬಂಧಿಸಿದ ದಾಖಲೆಗಳು ತನ್ನದೇ ಡ್ರೈವಿಂಗ್ ಸ್ಕೂಲ್ ನಡೆಸಿಕೊಂಡು ಬರುತ್ತಿರುವ ಪ್ರವೀಣ್ ಡಿಸೋಜಾ, ಕಳೆದ 29 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೇ, ಪುನೀತ್ ರಾಜ್‌ಕುಮಾರ್ ಅವರಂತೆ ಕಾರ್ ರೇಸ್ನಲ್ಲಿ ಆಸಕ್ತಿ ಹೊಂದಿದ್ದಾರೆ.
ಜೆಸಿಐ ಮಟ್ಟದಲ್ಲಿ ನಡೆಯುವ ಕಾರ್ ರೇಸ್ ಸ್ಪರ್ಧೆಯಲ್ಲಿ ಮೂರು ಬಾರಿ ಪ್ರಥಮ ಸ್ಥಾನವನ್ನೂ ಪಡೆದಿದ್ದಾರೆ. ನೇತ್ರದಾನ ಮತ್ತು ಅಂಗಾಂಗ ದಾನವನ್ನು ಮಾಡಬೇಕೆಂದು ಪ್ರವೀಣ್ ಕಳೆದ 10 ವರ್ಷಗಳಿಂದ ಯೋಜನೆ ಹಾಕಿಕೊಂಡಿದ್ದರು. ಇದೀಗ ಪವರ್ಸ್ಟಾರ್ ಪುನೀತ್ ಅವರ ಹಾದಿಯನ್ನು ಅನುಸರಿಸುತ್ತಿದ್ದಾರೆ.
ಓದಿ:22ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಬದುಕಿಗೆ ವಿದಾಯ ಹೇಳಿದ 'ರಾಜಕುಮಾರ'..