ಕರ್ನಾಟಕ

karnataka

By

Published : Apr 27, 2020, 8:11 PM IST

ETV Bharat / state

ಪಂಪ್‌ವೆಲ್ ಮೇಲ್ಸೇತುವೆ ಬಿರುಕು: ಕಾಮಗಾರಿ ತನಿಖೆಗೆ ಐವನ್ ಡಿಸೋಜ ಆಗ್ರಹ

3 ತಿಂಗಳ ಹಿಂದೆಯಷ್ಟೇ ಕಾಮಗಾರಿ ಸಂಪೂರ್ಣಗೊಂಡು ಉದ್ಘಾಟನೆಗೊಂಡ ಪಂಪ್‌ವೆಲ್ ಮೇಲ್ಸೇತುವೆ ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

Pumpwell   crack
ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಬಿರುಕು: ಕಾಮಗಾರಿ ತನಿಖೆ ನಡೆಸಲು ಐವನ್ ಡಿಸೋಜ ಆಗ್ರಹ

ಮಂಗಳೂರು: ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ
3 ತಿಂಗಳ ಹಿಂದೆಯಷ್ಟೇ ಕಾಮಗಾರಿ ಸಂಪೂರ್ಣಗೊಂಡು ಉದ್ಘಾಟನೆಗೊಂಡ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಕಳಪೆ ಕಾಮಗಾರಿಯಿಂದ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ದ.ಕ. ಜಿಲ್ಲಾ ಸಂಸದರು, ಬಿಜೆಪಿ ಶಾಸಕರು ಈ ಕಾಮಗಾರಿ ಬಗ್ಗೆ ಬಹಳ ಸಂಭ್ರಮ ಆಚರಿಸಿದ್ದರು. ನಿರ್ಮಾಣಕ್ಕೆ 10 ವರ್ಷಗಳ ಕಾಲ ತೆಗೆದುಕೊಂಡ ಈ ಕಾಮಗಾರಿಗೆ ತಗುಲಿದ ವೆಚ್ಚ ಪಾವತಿ ಮಾಡಿದ ಹಣ ಮತ್ತು ಕಳಪೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಬೇಕೆಂದು ಲೋಕೋಪಯೋಗಿ ಇಲಾಖೆ ಮತ್ತು ಕೇಂದ್ರ ಹೆದ್ದಾರಿ ಇಲಾಖೆಗೆ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ.‌ 10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಕಾಮಗಾರಿಯಿಂದ ಸರಕಾರಕ್ಕೆ ಮತ್ತು ಇಲಾಖೆಗೆ ತುಂಬಾ ನಷ್ಟ ಉಂಟಾಗಿದೆ. ಈ ಜವಾಬ್ದಾರಿಯನ್ನು ಲೋಕಸಭಾ ಸದಸ್ಯರೇ ವಹಿಸಿಕೊಳ್ಳಬೇಕು. ಕಳಪೆ ಕಾಮಗಾರಿ ನಡೆದ ಸ್ಥಳವು ತೀರಾ ಅಪಾಯಕಾರಿ ಅಂಚಿನಲ್ಲಿದ್ದು, ಈ ಬಗ್ಗೆ ಸುರಕ್ಷತಾ ದೃಷ್ಟಿಯಿಂದ ಕ್ರಮ ವಹಿಸಬೇಕು. ವಾಹನ ಸಂಚಾರಕ್ಕೆ ಅಪಾಯ ಇರುವುದರಿಂದ ಇಲಾಖೆ ಕೂಡಲೇ ತಾಂತ್ರಿಕ ವರದಿಯನ್ನು ತೆಗೆದುಕೊಳ್ಳಬೇಕು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ABOUT THE AUTHOR

...view details