ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಸಾರ್ವಜನಿಕ ಶೌಚಾಲಯ ನಿರ್ವಹಣೆ - ಮಂಗಳೂರು ಸುದ್ದಿ

ಮಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇವುಗಳ ನಿರ್ವಹಣೆ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶೌಚಾಲಯದಲ್ಲಿ ನಿರ್ವಹಣೆ ಗುತ್ತಿಗೆ ನೀಡದೇ ಅಲ್ಲಿ ಸ್ವಚ್ಚತೆ ಮಾಯವಾಗಿದೆ.

Public toilet management
ಸಾರ್ವಜನಿಕ ಶೌಚಾಲಯ ನಿರ್ವಹಣೆ

By

Published : Jan 18, 2021, 9:27 AM IST

ಮಂಗಳೂರು:ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ನಗರದಲ್ಲಿ ಜನಸಾಮಾನ್ಯರ ಓಡಾಟ ಜಾಸ್ತಿಯಾಗಿದೆ. ಜನರ ಅನುಕೂಲಕ್ಕಾಗಿ ಮಂಗಳೂರು ನಗರದ ವಿವಿಧೆಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಶೌಚಾಲಯಗಳ ನಿರ್ವಹಣೆಯನ್ನು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ.

ಮಂಗಳೂರು ನಗರದಲ್ಲಿ ನಿತ್ಯ ಲಕ್ಷಾಂತರ ಜನರು ಓಡಾಡುತ್ತಾರೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಇವುಗಳಲ್ಲಿ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣ, ಹಂಪನಕಟ್ಟೆ, ಹಳೆಬಸ್ ನಿಲ್ದಾಣದ ಬಳಿ ಪ್ರಮುಖವಾದ ಶೌಚಾಲಯವಿದೆ. ಈ ಶೌಚಾಲಯಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ.

ಸುಲಭ್ ಶೌಚಾಲಯ ಮತ್ತು ಟಾಯ್ಲೆಟ್ ಅಂಡ್​ ಟಾಯ್ಲೆಟ್ ಸಂಸ್ಥೆಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧೀನದಲ್ಲಿರುವ ಶೌಚಾಲಯಗಳನ್ನು ಗುತ್ತಿಗೆ ಮೂಲಕ ನೀಡಲಾಗಿದೆ. ಈ ಶೌಚಾಲಯಗಳನ್ನು ನಿರ್ವಹಣೆ ಮಾಡುವ ಸಂಸ್ಥೆಗಳು ಜನರಲ್ಲಿ ಶುಲ್ಕ ಸಂಗ್ರಹಿಸಿ ಶೌಚಾಲಯ ಸ್ವಚ್ಛತೆ ಮಾಡಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶೌಚಾಲಯದಲ್ಲಿ ನಿರ್ವಹಣೆ ಗುತ್ತಿಗೆ ನೀಡದೇ ಅಲ್ಲಿ ಸ್ವಚ್ಛತೆ ಮಾಯವಾಗಿದೆ.

ಮಂಗಳೂರಿನಲ್ಲಿ ಇತ್ತೀಚೆಗೆ ಹೊಸ ಶೌಚಾಲಯಗಳ ನಿರ್ಮಾಣವಾಗಿಲ್ಲ. ಈಗಾಗಲೇ ಇರುವ ಶೌಚಾಲಯಗಳ ನಿರ್ಮಾಣವನ್ನು ಮಾನದಂಡದಂತೆ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಇನ್ನು ಮಂಗಳೂರಿನ ಕೆಲವು ಖಾಸಗಿ ಸಂಸ್ಥೆಗಳು ಇ-ಟಾಯ್ಲೆಟ್ ಕೊಡುಗೆ ನೀಡಿದ್ದು ಇದು ಕೂಡ ಸ್ವಯಂಚಾಲಿತವಾಗಿ ಸ್ವಚ್ಛಗೊಳ್ಳುವ ಕಾರ್ಯ ಮಾಡುತ್ತಿದೆ. ಆದರೆ, ಕೆಲವೊಂದು ಕಡೆ ಇವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಪಾದನೆಯೂ ಕೇಳಿ ಬರುತ್ತಿದೆ.

ABOUT THE AUTHOR

...view details