ಬಂಟ್ವಾಳ(ದ.ಕ): ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರ್ಯಮತುಲ್ ಶಮ್ಲಾ 577 ಅಂಕ ಪಡೆಯುವ ಮೂಲಕ ಇಡೀ ಕಾಲೇಜಿಗೆ ಪ್ರಥಮಳಾಗಿದ್ದಾಳೆ.
ಬಂಟ್ವಾಳ: ವಿಜ್ಞಾನ ವಿಭಾಗದಲ್ಲಿ 577 ಅಂಕ ಪಡೆದ ಗ್ರಾಮೀಣ ಭಾಗದ ವಿದ್ಯಾರ್ಥಿನಿ! - ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ
ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 100ಕ್ಕೆ 100 ಅಂಕ ಪಡೆದಿದ್ದಾಳೆ. ಇಂಗ್ಲಿಷ್ನಲ್ಲಿ 95, ಹಿಂದಿಯಲ್ಲಿ 90, ರಸಾಯನಶಾಸ್ತ್ರದಲ್ಲಿ 96, ಜೀವಶಾಸ್ತ್ರದಲ್ಲಿ 96 ಅಂಕ ಪಡೆದಿದ್ದಾಳೆ.
ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 100ಕ್ಕೆ 100 ಅಂಕ ಪಡೆದಿದ್ದಾಳೆ. ಇಂಗ್ಲಿಷ್ನಲ್ಲಿ 95, ಹಿಂದಿಯಲ್ಲಿ 90, ರಸಾಯನಶಾಸ್ತ್ರದಲ್ಲಿ 96, ಜೀವಶಾಸ್ತ್ರದಲ್ಲಿ 96 ಅಂಕ ಪಡೆದಿದ್ದಾಳೆ. ಈಕೆ ವಿಟ್ಲ ಸೆರಂತಿಮಠ ನಿವಾಸಿ ಉಮರ್ ದಾರಿಮಿ ಪಟ್ಟೋರಿ ಹಾಗೂ ನೆಬಿಸತುಲ್ ಮುನೀರಾ ಎಂಬುವರ ಹಿರಿಯ ಮಗಳು.
ಎಸ್ಸೆಸ್ಸೆಲ್ಸಿಯಲ್ಲಿ ಮರ್ಯಮತುಲ್ ಶಮ್ಲಾ 617 ಅಂಕ ಪಡೆದಿದ್ದಳು. ಮುಂದೆ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಮಾಡುವ ಆಸೆ ವ್ಯಕ್ತಪಡಿಸಿದ್ದಾಳೆ. ಗ್ರಾಮೀಣ ಪರಿಸರದಲ್ಲಿರುವ ಈಕೆ ತೋರಿದ ಉತ್ತಮ ಸಾಧನೆಗೆ ಮನೆಯವರು ಮತ್ತು ಶಾಲೆಯವರು ಸಂತಸ ವ್ಯಕ್ತಪಡಿಸಿದ್ದು, ಮನೆಯವರು ಸಿಹಿ ಹಂಚಿ ಸಂಭ್ರಮಿಸಿದರು.