ಕರ್ನಾಟಕ

karnataka

ETV Bharat / state

ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಮಾಡಿದ್ರೆ ಕಠಿಣ ಕ್ರಮ: ಮಂಗಳೂರು ಪೊಲೀಸ್​ ಕಮಿಷನರ್ ಎಚ್ಚರಿಕೆ - ಮಂಗಳೂರು ನಗರ ಪೊಲೀಸ್ ಕಮಿಷನರ್

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ 24×7 ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ, ಅವಹೇಳಕಾರಿ ಹೇಳಿಕೆ, ವೈಯಕ್ತಿಕ ನಿಂದನೆ ಮಾಡುವ ರೀತಿ ಪೋಸ್ಟ್ ಹಾಕಿದ್ದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ ಸ್ಪಷ್ಟನೆ

Mangalore City Police Commissioner Kuldeep Kumar R Jain
ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್

By

Published : May 20, 2023, 9:05 PM IST

Updated : May 20, 2023, 9:18 PM IST

ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಂಗಳೂರು: ಚುನಾವಣೆ ಮುಗಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ, ಅವಹೇಳಕಾರಿ ಪೋಸ್ಟ್​​ಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 24×7 ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾಡಲಾಗಿದೆ. ಆದ್ದರಿಂದ ಪ್ರತಿಯೊಂದು ಜಾಲತಾಣಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಆದ್ದರಿಂದ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ, ಅವಹೇಳಕಾರಿ ಅಥವಾ ಮತ್ತೊಬ್ಬನಿಗೆ ವೈಯಕ್ತಿಕ ನಿಂದನೆ ಮಾಡುವ ರೀತಿ ಪೋಸ್ಟ್ ಹಾಕಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಅಂತಹ ಪೋಸ್ಟ್ ಗಳನ್ನು ಶೇರ್ ಮಾಡುವುದು, ರೀ ಟ್ವೀಟ್ ಮಾಡುವುದು, ಫಾರ್ವರ್ಡ್ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ, ಅವಹೇಳಕಾರಿ ಪೋಸ್ಟ್​ಗಳ ಕುರಿತಾಗಿ ಈಗಾಗಲೇ ಎರಡ್ಮೂರು ದೂರುಗಳು ಬಂದಿದೆ. ಈ ದೂರಿನ ವಿಚಾರಣೆಯನ್ನು ನಡೆಸಿದ್ದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅರೆ ನಗ್ನರಾಗಿ ಬರಬೇಡಿ ಎಂದಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ- ಧಾರವಾಡ :ಇನ್ನು ಧಾರವಾಡ ಜಿಲ್ಲೆಯಲ್ಲಿ ಹಾಡಹಗಲೇ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ನಗರದ ಕೃಷಿ ವಿವಿ ಬಳಿ ಇರುವ ವಿಕೆ ಪ್ಯಾಲೇಸ್‌ನ​ ಹೋಟೆಲ್‌ಗೆ ನುಗ್ಗಿದ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅರೆ ನಗ್ನರಾಗಿ ಬಂದಿದ್ದ ಯುವಕರಿಗೆ ಬುದ್ಧಿ ಹೇಳಿದ್ದಕ್ಕೆ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಏನಿದು ಘಟನೆ? : ಮೊದಲು ಇಬ್ಬರು ಯುವಕರು ಅರೆ ನಗ್ನರಾಗಿ ಬಂದಿದ್ದು, ಈ ರೀತಿ ಬರಬೇಡಿ ಹೋಟೆಲ್‌ದಲ್ಲಿ ಇತರರಿಗೆ ತೊಂದರೆಯಾಗುತ್ತದೆ ಎಂದು ಮಾಲೀಕರು ಬುದ್ಧಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರು ತಮ್ಮ ಗುಂಪಿನವರನ್ನು ಕರೆದುಕೊಂಡು ಬಂದು ದಾಂಧಲೆ ನಡಿಸಿ, ಹಲ್ಲೆ ಮಾಡಿದ್ದಾರೆ. ಹಲ್ಲೆಗೈದ ಪರಿಣಾಮ ಅಖಿಲೇಶ ಯಾದವ್, ದೀಪಾ ಯಾದವ್, ದೀಪಕ್ ಯಾದವ್ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಪುಂಡರು ರೌಡಿಸಂ ನಡೆಸಿದ ದೃಶ್ಯಾವಳಿಗಳು ಹೋಟೆಲ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಕುಟುಂಬದ ಆರು ಮಂದಿ ಸಮುದ್ರದಲ್ಲಿ ಮುಳುಗಿ ಸಾವು ;ಇವೆಲ್ಲ ರಾಜ್ಯದ ಸುದ್ದಿಯಾದರೆ ಗುಜರಾತ್​ ರಾಜ್ಯದ ಭರೂಚ್​ ಜಿಲ್ಲೆಯ ವಾಗ್ರಾ ತಾಲೂಕಿನ ಮುಲ್ಲರ್ ಗ್ರಾಮದ ಗಂಧರ್ ಕರಾವಳಿಯಲ್ಲಿ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಆರು ಮಂದಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಮುದ್ರದ ನೀರು ಏಕಾಏಕಿ ಹೆಚ್ಚಾದ ಪರಿಣಾಮ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಯತ್ನಿಸಿದ ಕುಟುಂಬ ಸದಸ್ಯರು ಆಳವಾದ ನೀರು ಇರುವ ಪ್ರದೇಶದಲ್ಲಿ ಮುಳುಗಿದ್ದಾರೆ. ಒಟ್ಟು 8 ಮಂದಿ ನೀರಿನಲ್ಲಿ ಮುಳುಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಇನ್ನುಳಿದ 6 ಮಂದಿ ನೀರು ಪಾಲಾಗಿದ್ದಾರೆ.

ಗಂಧರ್ ಕರಾವಳಿ ಪ್ರದೇಶದ ಸಮುದ್ರದ ಉಬ್ಬರವಿಳಿತದಲ್ಲಿ ಮುಳುಗಿದ ಎಲ್ಲ 8 ಜನರನ್ನು ಭರೂಚ್‌ನ ಬ್ರಾಡ್ ಹಾರ್ಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷಿಸಿ ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಇದನ್ನೂಓದಿ:ಸುಪ್ರೀಂಕೋರ್ಟ್​ಗೆ ಕೇಂದ್ರ ಅಪಮಾನ ಮಾಡಿದೆ... ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ: ಕೇಜ್ರಿವಾಲ್


Last Updated : May 20, 2023, 9:18 PM IST

ABOUT THE AUTHOR

...view details