ಕರ್ನಾಟಕ

karnataka

ETV Bharat / state

ಜನರಿಗೆ ಸೌಲಭ್ಯ ತಲುಪಿಸುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಕರ್ತವ್ಯ: ರಾಜ್ ಕಿರಣ್ ರೈ

ಸರ್ಕಾರದಿಂದ ನೀಡಲ್ಪಡುವ ವಿವಿಧ ಯೋಜನೆಗಳು ಫಲಾನುಭವಿಗಳನ್ನು ತಲುಪುವಂತೆ ನೋಡಿಕೊಳ್ಳುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಆದ್ಯ ಕರ್ತವ್ಯವಾಗಿದೆ ಎಂದು ಭಾರತೀಯ ಬ್ಯಾಂಕ್​ಗಳ ಸಂಘದ (ಐಬಿಎ) ಅಧ್ಯಕ್ಷ ರಾಜ್ ಕಿರಣ್ ರೈ ಹೇಳಿದ್ದಾರೆ.

dsd
ರಾಜ್ ಕಿರಣ್ ರೈ ಅಭಿಮತ

By

Published : Jan 21, 2021, 10:34 PM IST

ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಕಾರ್ಪೋರೇಶನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕ, ಭಾರತೀಯ ಬ್ಯಾಂಕ್​ಗಳ ಸಂಘದ (ಐಬಿಎ) ಅಧ್ಯಕ್ಷ ರಾಜ್ ಕಿರಣ್ ರೈ ಹೇಳಿದ್ದಾರೆ.

ಯೂನಿಯನ್ ಬ್ಯಾಂಕ್​ನ ವಲಯ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ನವೀಕೃತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸಿಬ್ಬಂದಿ ತಮ್ಮ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು ನಮ್ಮ ಬ್ಯಾಂಕ್​ ಉನ್ನತ ಪ್ರಗತಿಯೆಡೆಗೆ ತೆಗೆದುಕೊಂಡು ಹೋಗಬೇಕು.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೂಡ ಬ್ಯಾಂಕಿನ ಸಿಬ್ಬಂದಿಯ ಕಾರ್ಯ ನಿಷ್ಠೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಡಿಜಿಟಲೈಸೇಶನ್ ವಿಭಾಗದಿಂದ ಹೊರತಂದ ತ್ರೈಮಾಸಿಕ ಪತ್ರಿಕೆ ‘Digital trendz’ ಬಿಡುಗಡೆ ಮಾಡಿದರು.

ABOUT THE AUTHOR

...view details