ಉಳ್ಳಾಲ (ಮಂಗಳೂರು): ಅಂತರ್ ರಾಜ್ಯ ಸಂಪೂರ್ಣ ಸಂಚಾರಕ್ಕೆ ಮುಕ್ತ ಪಾಸ್ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ತಲಪಾಡಿ ಗಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ: ಅಂತರ್ ರಾಜ್ಯ ಪಾಸ್ ಮುಕ್ತ ಸಂಚಾರಕ್ಕೆ ಆಗ್ರಹ
ಸರ್ಕಾರದ ಓಣಂ ರಜಾ ಅವಧಿ ಕಳೆದು ಮುಂದಿನ ಆದೇಶ ಬರುವವರೆಗೆ ಆ್ಯಂಟಿಜೆನ್ ಟೆಸ್ಟ್ ಸಹಿತ ಅನುಮತಿ ಪತ್ರವನ್ನು ಕೈಬಿಡಲಾಗುತ್ತದೆ. ಅಷ್ಟೇ ಅಲ್ಲದೆ ಎಲ್ಲರಿಗೂ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದೆಂದು ಪ್ರತಿಭಟನಾನಿರತರಿಗೆ ಸ್ಥಳದಲ್ಲಿದ್ದ ಅಧಿಕಾರಿಗಳು ಭರವಸೆ ನೀಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯ ಅಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದ ಪ್ರತಿಭಟನಾ ಸಭೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಉದ್ಘಾಟಿಸಿದರು.
ಅಂತರ್ ರಾಜ್ಯ ಸಂಪರ್ಕದಲ್ಲಿ ನಿತ್ಯ ತೆರಳುವ ಉದ್ಯೋಗಿಗಳನ್ನು ತಲಪಾಡಿ ಗಡಿಯಲ್ಲಿದ್ದ ಅಧಿಕಾರಿಗಳು ಹೋಗಲು ಬಿಡದೆ ಕಿರಿಕಿರಿ ಮಾಡುತ್ತಿದ್ದಾರೆ. ಸರ್ಕಾರದ ಓಣಂ ರಜಾ ಅವಧಿ ಕಳೆದು ಮುಂದಿನ ಆದೇಶ ಬರುವವರೆಗೆ ನಿತ್ಯ ಉದ್ಯೋಗಿಗಳ ಆ್ಯಂಟಿಜೆನ್ ಟೆಸ್ಟ್ ಸಹಿತ ಅನುಮತಿ ಪತ್ರವನ್ನು ಕೈಬಿಡಲಾಗುತ್ತದೆ. ಅಷ್ಟೇ ಅಲ್ಲದೆ ಎಲ್ಲರಿಗೂ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದೆಂದು ಪ್ರತಿಭಟನಾನಿರತರಿಗೆ ಸ್ಥಳದಲ್ಲಿದ್ದ ಅಧಿಕಾರಿಗಳು ಭರವಸೆ ನೀಡಿದರು.