ಮಂಗಳೂರು: ಹಲವಾರು ಗ್ರಾಹಕರಿಗೆ ಮೋಸ ಮಾಡಿ ವಂಚಿಸಿರುವ ವೃಕ್ಷ ಸೊಲ್ಯುಷನ್ ಸಂಸ್ಥೆ ವಿರುದ್ಧ ಕಾನೂನು ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಒತ್ತಾಯಿಸಿ ತುಳುನಾಡು ರಕ್ಷಣಾ ವೇದಿಕೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ವೃಕ್ಷ ಸೊಲ್ಯುಷನ್ ವಿರುದ್ಧ ಕಾನೂನು ಪ್ರಕ್ರಿಯೆ ಚುರುಕುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ - ಮಂಗಳೂರಲ್ಲಿ ವೃಕ್ಷ ಸಲೂಷನ್ ವಿರುದ್ಧ ಪ್ರತಿಭಟನೆ
ಗ್ರಾಹಕರಿಗೆ ವಂಚಿಸಿದ ವೃಕ್ಷ ಸೊಲ್ಯುಷನ್ ಸಂಸ್ಥೆ ವಿರುದ್ಧ ಕಾನೂನು ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಈ ವೇಳೆ ಮಾತನಾಡಿದ ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ನಾಲ್ಕೂವರೆ ವರ್ಷಗಳ ಹಿಂದೆ ನಗರದ ಶರವು ದೇವಳದ ಬಳಿ ಕಾರ್ಯಾರಂಭ ಮಾಡಿದ್ದ ವೃಕ್ಷ ಬ್ಯುಸಿನೆಸ್ ಸೊಲ್ಯುಷನ್ ಎಂಬ ಸಂಸ್ಥೆ ಸುಮಾರು 10-15 ಕೋಟಿ ರೂ. ಹಣವನ್ನು ಲಪಟಾಯಿಸಿ ಮೂರು ಸಾವಿರಕ್ಕೂ ಅಧಿಕ ಮಂದಿಗೆ ವಂಚಿಸಿದೆ. ಬಡಜನರು ಉಳಿತಾಯಕ್ಕಾಗಿ ಜಮೆ ಮಾಡುತ್ತಿದ್ದ ಹಣವನ್ನು ಜಾಗ ಖರೀದಿ, ಸೂಪರ್ ಮಾರ್ಕೆಟ್ಗಳಿಗೆ ಹಾಕಿತ್ತು. ಆದರೆ ಮೆಚ್ಯುರಿಟಿ ಆಗುವ ಸಂದರ್ಭದಲ್ಲಿ ಜನರಿಗೆ ಕೊಡದೆ ಮೋಸ ಮಾಡಿದೆ.
ಈ ಸಂದರ್ಭದಲ್ಲಿ ತುಳುನಾಡು ರಕ್ಷಣಾ ವೇದಿಕೆ ಹೋರಾಟ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳು ಜೈಲು ಸೇರುವಂತೆ ಮಾಡಿತ್ತು. ಆದರೆ ಇನ್ನೂ ಬಡ ಜನರಿಗೆ ನ್ಯಾಯ ದೊರಕಿಲ್ಲ. ಅವರ ಹಣ ಇನ್ನೂ ದೊರಕಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಿ ಬಡ ಜನತೆಗೆ ನ್ಯಾಯ ದೊರಕಬೇಕೆಂದು ತುಳುನಾಡು ರಕ್ಷಣಾ ವೇದಿಕೆ ಈ ಪ್ರತಿಭಟನೆ ಕೈಗೊಂಡಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ವೃಕ್ಷ ಸೊಲ್ಯೂಷನ್ನಿಂದ ಮೋಸ ಹೋದವರು ಭಾಗವಹಿಸಿದ್ದರು.