ಉಳ್ಳಾಲ: ಸಮುದ್ರಪಾಲಾಗುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರ ರಕ್ಷಿಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.
ಸೋಮೇಶ್ವರದಲ್ಲಿ ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ - ಸ್ಥಳೀಯ ಈಜುಗಾರ ಕಿರಣ್
ಉತ್ತರ ಪ್ರದೇಶ ಮೂಲದ 11 ಮಂದಿ ಸೋಮೇಶ್ವರ ಸಮುದ್ರ ವಿಹಾರಕ್ಕೆ ಬಂದಿದ್ದರು. ಈ ಪೈಕಿ ನಾಲ್ವರು ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಇದರಲ್ಲಿ ಯುವಕನೋರ್ವ ಸಮುದ್ರದ ಅಲೆಗಳ ನಡುವೆ ಸಿಲುಕಿ ಸುಮಾರು 40 ಮೀ.ನಷ್ಟು ದೂರ ಹೋಗಿದ್ದಾನೆ.
ಸೋಮೇಶ್ವರ ಸಮುದ್ರ ಪಾಲಾಗುತ್ತಿದ್ದವನ ರಕ್ಷಣೆ
ಉತ್ತರ ಪ್ರದೇಶ ಮೂಲದ 11 ಮಂದಿ ಸೋಮೇಶ್ವರ ಸಮುದ್ರ ವಿಹಾರಕ್ಕೆ ಬಂದಿದ್ದರು. ಈ ಪೈಕಿ ನಾಲ್ವರು ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಇದರಲ್ಲಿ ಯುವಕನೋರ್ವ ಸಮುದ್ರದ ಅಲೆಗಳ ನಡುವೆ ಸಿಲುಕಿ ಸುಮಾರು 40 ಮೀ.ನಷ್ಟು ದೂರ ಹೋಗಿದ್ದಾನೆ.
ಘಟನೆಯನ್ನು ಕಂಡ ಕರಾವಳಿ ಕಾವಲು ಪಡೆ ಸಿಬ್ಬಂದಿ ಅಶೋಕ್ ಸೋಮೇಶ್ವರ ಮತ್ತು ಸ್ಥಳೀಯ ಈಜುಗಾರ ಕಿರಣ್ ಒಂಭತ್ತು ಕೆರೆ ಎಂಬುವರು ಬಿಹಾರ ಮೂಲದ ಮಿಥುನ್ ಕುಮಾರ್ ಎಂಬ ಯುವಕನನ್ನು ದಡ ಸೇರಿಸಿ ಪ್ರಾಣ ರಕ್ಷಿಸಿದ್ದಾರೆ.