ಕರ್ನಾಟಕ

karnataka

ETV Bharat / state

ಬಂಟ್ವಾಳ ಅರಣ್ಯ ಇಲಾಖೆಯಿಂದ ತೋಟವೊಂದರಲ್ಲಿ ಪತ್ತೆಯಾದ ಚಿಪ್ಪುಹಂದಿ ರಕ್ಷಣೆ - Bantwal in Dakshina Kannada district

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್‌ ಯಶೋಧರ, ಅರಣ್ಯ ರಕ್ಷಕರಾದ ಜಿತೇಶ್ ಮತ್ತು ರೇಖಾ ಭಾಗವಹಿಸಿದ್ದರು..

Protection of shellpig by Bantwal Forest Department
ಬಂಟ್ವಾಳ ಅರಣ್ಯ ಇಲಾಖೆಯಿಂದ ತೋಟವೊಂದರಲ್ಲಿ ಪತ್ತೆಯಾದ ಚಿಪ್ಪುಹಂದಿ ರಕ್ಷಣೆ

By

Published : Dec 6, 2020, 6:39 AM IST

ದಕ್ಷಿಣ ಕನ್ನಡ :ಜಿಲ್ಲೆಯ ಬಂಟ್ವಾಳ ಭಾಗದಲ್ಲಿ ಚಿಪ್ಪುಹಂದಿಯನ್ನು ರಕ್ಷಿಸಿ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ತಾಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಗೋಳ್ತಮಜಲು ಗ್ರಾಮದ ಕೃಷ್ಣಕೋಡಿ ಎಂಬಲ್ಲಿನ ತೋಟ ಒಂದರಲ್ಲಿ ಅಪರೂಪದ ಪ್ರಾಣಿಯಾದ ಚಿಪ್ಪುಹಂದಿ ಕಂಡು ಬಂದಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ.

ಚಿಪ್ಪು ಹಂದಿ ಇರುವುದರ ಬಗ್ಗೆ ತೋಟದ ಮಾಲೀಕ ಪುರುಷೋತ್ತಮ ಅವರು ಬಂಟ್ವಾಳ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಹಿಡಿದು ಬಳಿಕ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್‌ ಯಶೋಧರ, ಅರಣ್ಯ ರಕ್ಷಕರಾದ ಜಿತೇಶ್ ಮತ್ತು ರೇಖಾ ಭಾಗವಹಿಸಿದ್ದರು.

ABOUT THE AUTHOR

...view details