ಕರ್ನಾಟಕ

karnataka

ETV Bharat / state

ಪಾಕಿಸ್ತಾನ ಜಿಂದಾಬಾದ್ ಎಂದು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ - ಉಳ್ಳಾಲ ಪೊಲೀಸ್​ ಠಾಣೆ

ಈ ಬಗ್ಗೆ ಫೇಸ್ ಬುಕ್​ನಲ್ಲಿ ವಿಡಿಯೋ ಮಾಡಿ ಸಂಬಂಧಿಕರು ಪರಿಚಯಸ್ಥರು ಇದ್ದರೆ ಗಮನಹರಿಸುವಂತೆ ಮನವಿ ಮಾಡಿದ್ದು, ಈತ ವಾಮಂಜೂರಿನ ನವೀನ್ ಎಂದು ತಿಳಿದು ಬಂದಿದೆ..

Mental   patient
ಮಾನಸಿಕ ಅಸ್ವಸ್ಥನ ರಕ್ಷಣೆ

By

Published : Mar 14, 2021, 10:22 PM IST

ಉಳ್ಳಾಲ: ನಗರದಲ್ಲಿ ಪಾಕಿಸ್ತಾನ ಜಿಂದಾಬಾದ್, ನಾನು ಪಾಕಿಸ್ತಾನದ ಕರಾಚಿಯಿಂದ ಬಂದ್ದಿದೇನೆ ಎಂದು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಲಾಗಿದೆ.

ಮಾನಸಿಕ ಅಸ್ವಸ್ಥನ ರಕ್ಷಣೆ

ಕಳೆದ ಕೆಲದಿನಗಳಿಂದ ಅಪರಿಚಿತ ಮಾನಸಿಕ ಅಸ್ವಸ್ಥ ಪಾಕಿಸ್ತಾನದ ಪರ‌ ಘೋಷಣೆ ಕೂಗುತ್ತಾ ತಾನು ಕರಾಚಿಯಿಂದ ಬಂದಿದ್ದು ನನ್ನ ಹೆಸರು ದಾವೂದ್ ಇಬ್ರಾಹಿಂ ಎಂದು ತಿರುಗಾಡುತ್ತಿದ್ದ ವಿಡಿಯೋ ವ್ಯೆರಲ್ ಆಗಿತ್ತು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಝಿಕ್‌ ಉಳ್ಳಾಲ ನೆರವಿನೊಂದಿಗೆ ಉಳ್ಳಾಲ ದರ್ಗಾದಲ್ಲಿ ಈತನನ್ನು ಬಿಟ್ಟು ಬಂದಿದ್ದರು.

ಈ ಬಗ್ಗೆ ಫೇಸ್ ಬುಕ್​ನಲ್ಲಿ ವಿಡಿಯೋ ಮಾಡಿ ಸಂಬಂಧಿಕರು ಪರಿಚಯಸ್ಥರು ಇದ್ದರೆ ಗಮನಹರಿಸುವಂತೆ ಮನವಿ ಮಾಡಿದ್ದು, ಈತ ವಾಮಂಜೂರಿನ ನವೀನ್ ಎಂದು ತಿಳಿದು ಬಂದಿದೆ. ತಾಯಿಯೊಂದಿಗೆ ಕಲ್ಲಾಪು ಪ್ರದೇಶದಲ್ಲಿ ವಾಸವಾಗಿದ್ದ ಈತನಿಗೆ ಹಲವಾರು ಬಾರಿ ಚಿಕಿತ್ಸೆ ಕೊಡಿಸಿದ್ದರು ಗುಣಮುಖವಾಗಿರಲಿಲ್ಲ.

ABOUT THE AUTHOR

...view details