ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಮಕ್ಕಳ ಸಹಾಯವಾಣಿಯಿಂದ ಮಧ್ಯಪ್ರದೇಶದ ಬಾಲಕಿಯ ರಕ್ಷಣೆ - ಮಧ್ಯಪ್ರದೇಶದ ಬಾಲಕಿಯ ರಕ್ಷಣೆ

ಮಕ್ಕಳ ಸಹಾಯವಾಣಿ ಸಂಸ್ಥೆಯು ನಗರದ ಹೊರವಲಯದಲ್ಲಿರುವ ತೋಟ ಬೇಂಗ್ರೆಯ ಬಳಿ ಅಳುತ್ತಿದ್ದ, 11 ವರ್ಷದ ಮಧ್ಯಪ್ರದೇಶ ಮೂಲದ ಬಾಲಕಿಯ ರಕ್ಷಿಣೆ ಮಾಡಿದೆ.

ಮಂಗಳೂರು ಸಿಟಿ

By

Published : Aug 26, 2019, 7:17 PM IST

ಮಂಗಳೂರು:ಮಕ್ಕಳ ಸಹಾಯವಾಣಿ ಸಂಸ್ಥೆಯು ಶನಿವಾರ ರಾತ್ರಿ 7.30ರ ಸುಮಾರಿಗೆ ನಗರದ ಹೊರವಲಯದಲ್ಲಿರುವ ತೋಟ ಬೇಂಗ್ರೆಯ ಬಳಿ 11 ವರ್ಷದ ಮಧ್ಯಪ್ರದೇಶ ಮೂಲದ ಬಾಲಕಿಯ ರಕ್ಷಿಸಿದ ಘಟನೆ ನಡೆದಿದೆ.

ಬಾಲಕಿಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಪೋಷಕರಿಲ್ಲದೆ ಒಬ್ಬಳೇ ರಸ್ತೆ ಬದಿಯಲ್ಲಿ ಅಳುತ್ತಿದ್ದಳು. ತಕ್ಷಣ ಸ್ಥಳಕ್ಕೆ ಧಾವಿಸಿದ ಚೈಲ್ಡ್ ಲೈನ್ ಸಂಸ್ಥೆ, ಪಣಂಬೂರು ಪೊಲೀಸ್ ಸಿಬ್ಬಂದಿ, ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳೀಯ ಮಾಜಿ ಕಾರ್ಪೊರೇಟರ್ ಮೀರಾ ಕರ್ಕೇರಾ ಅವರ ಸಹಕಾರದೊಂದಿಗೆ ಬೋಂದೆಲ್ ಬಳಿಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಸಂದರ್ಭ ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿ ಅಶೋಕ್ ಕುಮಾರ್, ಕಮಲಾಕ್ಷ, ಮಕ್ಕಳ ಸಹಾಯವಾಣಿಯ ದೀಕ್ಷಿತ್ ಅಚ್ರಪ್ಪಾಡಿ, ಜಯಂತಿ ಕೋಕಳ, ರಂಜಿತ್ ಕಾಡುತೋಟ ಬಾಲಕಿಯ ರಕ್ಷಣಾ ತಂಡದಲ್ಲಿದ್ದರು.

ABOUT THE AUTHOR

...view details