ಕರ್ನಾಟಕ

karnataka

ETV Bharat / state

ಭಜರಂಗದಳ ಕಾರ್ಯಕರ್ತರಿಂದ 12 ಗೋವುಗಳ ರಕ್ಷಣೆ: ಆರೋಪಿಗಳು ಪರಾರಿ - Bajarang Dal activists

ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಅಕ್ರಮವಾಗಿ ಸಾಗಟ ಮಾಡುತ್ತಿದ್ದ 12 ಜಾನುವಾರುಗಳನ್ನು ರಕ್ಷಿಸಿದ್ದಾರೆ.

Cows
Cows

By

Published : Oct 25, 2020, 3:34 PM IST

ಮಂಗಳೂರು: ಅಕ್ರಮವಾಗಿ ವಾಹನದಲ್ಲಿ ಸಾಗಟ ಮಾಡುತ್ತಿದ್ದ 12 ಜಾನುವಾರುಗಳನ್ನು ಭಜರಂಗದಳ ಕಾರ್ಯಕರ್ತರು ನಗರದ ಉಜ್ಜೋಡಿ ಬಳಿ ರಕ್ಷಿಸಿದ್ದಾರೆ.

ಪಿಕ್ ಅಪ್ ನಲ್ಲಿ ಬಂಟ್ವಾಳದಿಂದ ಮಂಗಳೂರಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಭಜರಂಗದಳದ ಕಾರ್ಯಕರ್ತರು ಪಂಪ್ ವೆಲ್ ಬಳಿ ಕಾದು ಕುಳಿತಿದ್ದರು.

ಆದರೆ ಭಜರಂಗದಳದ ಕಾರ್ಯಕರ್ತರನ್ನು ಕಂಡ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ನಗರದ ಉಜ್ಜೋಡಿ ಬಳಿ ವಾಹನ ಅಡ್ಡಗಟ್ಟುವಲ್ಲಿ ಕಾರ್ಯಕರ್ತರು ಮತ್ತು ಕಂಕನಾಡಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ವೇಳೆ ಪಿಕ್ ಅಪ್ ಚಾಲಕ ಮತ್ತು ಇನ್ನಿಬ್ಬರು ಆರೋಪಿಗಳು ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ನಿನ್ನೆ ಟೆಂಪೋ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 200 ಕೆ.ಜಿ ಗೋಮಾಂಸವನ್ನು ನಗರದ ಕುದ್ರೋಳಿ ಸಮೀಪ ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ABOUT THE AUTHOR

...view details