ಮಂಗಳೂರು: ನಗರದ ಅತ್ತಾವರ ಸಮೀಪದ ಆಮಂತ್ರಣ ವಸತಿಗೃಹದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಸತಿಗೃಹದ ಮ್ಯಾನೇಜರ್ ಚಂದ್ರಶೇಖರ ಹಾಗೂ ರೂಂ ಬಾಯ್ ಹರೀಶ್ ಪೂಜಾರಿ ಬಂಧಿತ ಆರೋಪಿಗಳು. ಆರೋಪಿಗಳು ನಗರದ ಅತ್ತಾವರದ ಬಳಿಯಿರುವ ವಸತಿಗೃಹದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.