ಕರ್ನಾಟಕ

karnataka

ETV Bharat / state

ಉಳ್ಳಾಲ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ, ನಾಲ್ವರ ಬಂಧನ - ETV bharat kannada news

ಉಳ್ಳಾಲದ ಕೋಟೆಕಾರು ಬೀರಿಯ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ullala-prostitution-in-a-rented-house-four-arrested
ಉಳ್ಳಾಲ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ, ನಾಲ್ವರ ಬಂಧನ

By

Published : Dec 7, 2022, 3:44 PM IST

ಉಳ್ಳಾಲ(ದಕ್ಷಿಣ ಕನ್ನಡ): ಇಲ್ಲಿನ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬಾಡಿಗೆ ಮನೆಯೊಂದರಲ್ಲಿ ಯುವತಿಯರೊಂದಿಗೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದು, ದಂಪತಿ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.

ಬಾಡಿಗೆ ಮನೆ ನಿವಾಸಿ ಮೊಹಮ್ಮದ್ ಇಕ್ಬಾಲ್, ಆತನ ಪತ್ನಿ ಅಲಿಮಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್ ಹಾಗು ಇರ್ಶಾದ್ ಅಡ್ಯನಡ್ಕ ಬಂಧಿತರು. ಇವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೊಹಮ್ಮದ್ ಇಕ್ಬಾಲ್ ಪ್ರಕರಣದ ಮುಖ್ಯ ಆರೋಪಿ. ಈತ ಈ ಹಿಂದೆ ಪಿಲಾರು, ಕಾಪಿಕಾಡು ಪ್ರದೇಶಗಳಲ್ಲೂ ಬಾಡಿಗೆ ಮನೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಇವರಿಗೆ ಶರ್ಫುದ್ದೀನ್ ಎಂಬಾತ ಯುವತಿಯರನ್ನು ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಬೀದಿ ಬದಿಯಲ್ಲಿ ಸಿಕ್ಕಿತು ಲಕ್ಷ ಗಟ್ಟಲೆ ಹಣ : ಅರ್ಧ ಗಂಟೆಯಲ್ಲಿ ಕೈತಪ್ಪಿದು ಹೀಗೆ...

ABOUT THE AUTHOR

...view details