ಕರ್ನಾಟಕ

karnataka

ETV Bharat / state

ವೃತ್ತಿ ಜೀವನದಲ್ಲಿ ಪದೋನ್ನತಿ ಪ್ರಮುಖ ಘಟ್ಟ: 143 ಸಿಬ್ಬಂದಿ​ ಪದೋನ್ನತಿ - undefined

ಮಂಗಳೂರಿನ ಪೊಲೀಸ್​ ಸಮುದಾಯ ಭವನದಲ್ಲಿ 143 ಪೊಲೀಸರಿಗೆ ಪದೋನ್ನತಿ ನೀಡಲಾಯಿತು. ಪದೋನ್ನತಿ ಪಡೆದ ಎಲ್ಲ ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತ ಸಂದೀಪ್​ ಪಾಟೀಲ್ ಅಭಿನಂದನೆ ಸಲ್ಲಿಸಿದರು.

ಪದೋನ್ನತಿ ಪಡೆಯುತ್ತಿರುವ ಸಿಬ್ಬಂದಿ

By

Published : Jul 5, 2019, 2:55 AM IST

ಮಂಗಳೂರು:ಪೊಲೀಸ್ ವೃತ್ತಿ ಜೀವನದಲ್ಲಿ ಪದೋನ್ನತಿ ಮಹತ್ತರವಾದ ಘಟ್ಟ. ಜವಾಬ್ದಾರಿ, ಕರ್ತವ್ಯಗಳು ಹೆಚ್ಚಾಗುತ್ತವೆ ಎಂದು ನಗರ ಪೊಲೀಸ್​ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.

ನಗರ ಪೊಲೀಸ್​ ಆಯುಕ್ತ ಸಂದೀಪ್ ಪಾಟೀಲ್

ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗುರುವಾರ ನಡೆದ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪದೋನ್ನತಿ ನೀಡಿ ಅವರು ಮಾತನಾಡಿದರು.

ಪದೋನ್ನತಿ ಬಳಿಕ ಕಾನೂನು, ನಿಯಮಗಳ ಅರಿವೂ ವಿಸ್ತರಿಸಬೇಕು‌. ಠಾಣೆಗೆ ಬಂದವರೊಡನೆ ನಾವು ವರ್ತಿಸುವುದರಿಂದ ಹಿಡಿದು ಎಲ್ಲ ಹಂತದ ಅರಿವು, ಕಾರ್ಯ ದಕ್ಷತೆಯನ್ನು ಹೊಂದಿರಬೇಕು ಎಂದು ಹೇಳಿದರು.

143 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪದೋನ್ನತಿ ಪದವಿ ನೀಡಲಾಯಿತು. ಎಆರ್​ಎಸ್​ಐನಿಂದ ಆರ್​ಎಸ್​ಐ ಹುದ್ದೆಗೆ 7 ಮುಂಬಡ್ತಿ, ಸಿಎಚ್​ಸಿನಿಂದ ಎಎಸ್​ಐ ಹುದ್ದೆಗೆ 29 ಅಧಿಕಾರಿಗಳಿಗೆ ಮುಂಬಡ್ತಿ, ಎಎಚ್​ಸಿನಿಂದ ಎಆರ್​ಎಸ್​ಐ ಹುದ್ದೆಗೆ 40 ಅಧಿಕಾರಿಗಳಿಗೆ ಮುಂಬಡ್ತಿ, ಸಿಪಿಸಿನಿಂದ ಸಿಎಚ್​ಸಿ ಹುದ್ದೆಗೆ 66 ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಯಿತು.

ಸಿಪಿಸಿಯಿಂದ ಎಎಚ್​ಸಿ ಹುದ್ದೆಗೆ 3 ಮಂದಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ. ಡಿಸಿಪಿ ಹನುಮಂತ ರಾಯ, ಲಕ್ಷ್ಮೀ ಗಣೇಶ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.

For All Latest Updates

TAGGED:

ABOUT THE AUTHOR

...view details