ಮಂಗಳೂರು: ಕಡಲತೀರದಲ್ಲಿ ಸಿರಿಯಾ ದೇಶದ ಹಡಗಿನಲ್ಲಿ ದೋಷ ಕಂಡು ಬಂದಿದ್ದು ಅಪಾಯದಲ್ಲಿದ್ದ 15 ಮಂದಿಯನ್ನು ರಕ್ಷಿಸಲಾಗಿದೆ. ಉಳ್ಳಾಲದ 5 ರಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ಸಂಭವಿಸಿದೆ. MV PRINCESS MIRAL ಎಂಬ ಹಡಗು ಮಂಗಳೂರು ತೀರದಲ್ಲಿ ಸಾಗುವ ವೇಳೆ ದೋಷ ಕಾಣಿಸಿಕೊಂಡಿದೆ. ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು.
ಒಮನ್ನಿಂದ ಈಜಿಪ್ಟ್ಗೆ ಪ್ರಯಾಣ ಬೆಳೆಸಿದ್ದ ಹಡಗು ಮಂಗಳೂರು ಕಡಲತೀರದಲ್ಲಿ ಪ್ರಯಾಣಿಸುವಾಗ ಒಳಭಾಗದ ಸಣ್ಣ ರಂಧ್ರದ ಮೂಲಕ ನೀರು ಬರಲಾರಂಭಿಸಿದೆ. ಇದರಿಂದ ಹಡಗಿನಲ್ಲಿದ್ದ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದಾರೆ.