ಕರ್ನಾಟಕ

karnataka

ETV Bharat / state

ಮಂಗಳೂರು: ಲಾಡ್ಜ್‌ನಲ್ಲಿ ಸ್ನೇಹಿತೆಯ ಭೇಟಿಗೆ ಬಂದಿದ್ದ ಅನ್ಯಕೋಮಿನ ವ್ಯಕ್ತಿ ಮೇಲೆ ಹಿಂದೂ ಪರ ಸಂಘಟನೆಯಿಂದ ದಾಳಿ ಆರೋಪ - Pro Hindu organization attack on other religion man in Mangalore news

ಹಾವೇರಿ ಮೂಲದ ಹಿಂದೂ ಮಹಿಳೆ ಮತ್ತು ಮೂಲತಃ ವಿಜಯಪುರದವನಾದ ಬೆಂಗಳೂರಿನಲ್ಲಿ ವೃತ್ತಿ‌ ನಿರ್ವಹಿಸುತ್ತಿರುವ ಮುಸ್ಲಿಂ ವ್ಯಕ್ತಿ ಪರಸ್ಪರ ಪರಿಚಿತರಾಗಿದ್ದರು.‌ ಅವರು ಭೇಟಿಯಾಗಲೆಂದು ಮಂಗಳೂರಿನ ಲಾಡ್ಜ್‌ಗೆ ಆಗಮಿಸಿದ್ದ ಮಾಹಿತಿ ತಿಳಿದು ಹಿಂದೂ ಪರ ಸಂಘಟನೆಯವರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಂಗಳೂರು
ಮಂಗಳೂರು

By

Published : Oct 22, 2021, 3:17 PM IST

ಮಂಗಳೂರು:ನಗರದ ಲಾಡ್ಜ್‌ವೊಂದರಲ್ಲಿ ಅನ್ಯಕೋಮಿನ ಜೋಡಿ ಇರುವ ಮಾಹಿತಿ ತಿಳಿದು ಹಿಂದೂ ಪರ ಸಂಘಟನೆಯವರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿರುವ ಘಟನೆ ಬುಧವಾರ ನಡೆದಿದೆ.

ಹಾವೇರಿ ಮೂಲದ ಹಿಂದೂ ಮಹಿಳೆ ಮತ್ತು ಮೂಲತಃ ವಿಜಯಪುರದವನಾದ ಬೆಂಗಳೂರಿನಲ್ಲಿ ವೃತ್ತಿ‌ ನಿರ್ವಹಿಸುತ್ತಿರುವ ಮುಸ್ಲಿಂ ವ್ಯಕ್ತಿ ಪರಸ್ಪರ ಪರಿಚಿತರಾಗಿದ್ದರು.‌ ಅವರು ಭೇಟಿಯಾಗಲೆಂದು ಮಂಗಳೂರಿನ ಲಾಡ್ಜ್‌ಗೆ ಆಗಮಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಷಯ ತಿಳಿದು ಬಂದರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ.

For All Latest Updates

TAGGED:

ABOUT THE AUTHOR

...view details