ಆಲಂಕಾರು (ದಕ್ಷಿಣ ಕನ್ನಡ): ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರಿನಲ್ಲಿ ಮೆಸ್ಕಾಂ ಶಾಖಾಧಿಕಾರಿ ಹಾಗೂ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿಚಾರ: ಸಿಬ್ಬಂದಿಯಿಂದ ಸಾಂಕೇತಿಕ ಪ್ರತಿಭಟನೆ - Mescom Branch and staff
ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದ ವಿರುದ್ಧ ಆಲಂಕಾರಿನಲ್ಲಿ ಮೆಸ್ಕಾಂ ಶಾಖಾಧಿಕಾರಿ ಹಾಗೂ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
![ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿಚಾರ: ಸಿಬ್ಬಂದಿಯಿಂದ ಸಾಂಕೇತಿಕ ಪ್ರತಿಭಟನೆ Symbolic protest](https://etvbharatimages.akamaized.net/etvbharat/prod-images/768-512-03:12-kn-dk-01-protest-av-pho-kac10008-01062020134043-0106f-1590999043-99.jpg)
Symbolic protest
ಭಾರತ ವಿದ್ಯುತ್ ಸಚಿವಾಲಯವು 2003ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿ ತಂದು ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ನೀತಿ ವಿರುದ್ಧ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ನೀಡಿದ ಕರೆಗೆ ಬೆಂಬಲವಾಗಿ ಆಲಂಕಾರು ಮೆಸ್ಕಾಂ ಶಾಖಾ ಕಚೇರಿಯ ಮುಂಭಾಗದಲ್ಲಿ ಆಲಂಕಾರು ಮೆಸ್ಕಾ ಶಾಖಾಧಿಕಾರಿ ಜೋಸೆಫ್ ಗೊನ್ಸಾಲ್ವಿಸ್ ಹಾಗೂ ಸಿಬ್ಬಂದಿ ಸಾಂಕೇತಿಕವಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿ ಮೌನ ಪ್ರತಿಭಟನೆ ನಡೆಸಿದರು.